ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕಜಿಪಿತ್ಲು ಪರಿಸರದಲ್ಲಿ ಹೆಬ್ಬಾವು ಕಾಟ ಕಂಡುಬಂದಿದೆ.
ಕಳೆದ ಕೆಲವು ದಿನಗಳಿಂದ ಪರಿಸರದಲ್ಲಿ ಬೆಕ್ಕುಗಳು ಮತ್ತು ನಾಯಿಗಳು ಒಂದರ ಹಿಂದೆ ಒಂದರಂತೆ ನಾಪತ್ತೆಯಾಗುತ್ತಿದ್ದು, ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿತ್ತು. ಅಕ್ಟೋಬರ್ 28ರ ಭಾನುವಾರ ತಡರಾತ್ರಿ ದೊಡ್ಡ ಗಾತ್ರದ ಹೆಬ್ಬಾವೊಂದು ಬೆಕ್ಕೊಂದನ್ನು ಹಿಡಿದು ಪೊದೆಯೊಳಗೆ ಎಳೆದುಕೊಂಡು ಹೋಗುತ್ತಿರುವುದು ಸ್ಥಳೀಯರಿಗೆ ನೇರವಾಗಿ ಗೋಚರಿಸಿದೆ.
ದಾಳಿ ಮಾಡುತ್ತಿದ್ದದ್ದು ಬೇರೆ ಯಾವುದೋ ಕಾಡುಪ್ರಾಣಿಯಲ್ಲ, ಬದಲಿಗೆ ಬೃಹತ್ ಹೆಬ್ಬಾವು ಎಂಬುದು ಈಗ ಸ್ಪಷ್ಟವಾಗಿದ್ದು, ಮನೆಯವರಲ್ಲಿ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಆತಂಕ ಹೆಚ್ಚಾಗಿದೆ.