ಬಂಟ್ವಾಳ: ಕಲ್ಲಡ್ಕದಲ್ಲಿ 49ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಹಿನ್ನೆಲೆಯಲ್ಲಿ ಮೂರನೇ ವರ್ಷದ ಮಾರ್ನೆಮಿದ ಗೊಬ್ಬು ಕ್ರೀಡಾಕೂಟ ಕಲ್ಲಡ್ಕದ ಉತ್ಸವದ ಅಂಗಣದಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ರೂಪಕಲಾ ಮೋಹನ್ ಉದ್ಘಾಟಿಸಿದರು. ಕೊಳಕಿರು ಫ್ರೆಂಡ್ಸ್ ಅಧ್ಯಕ್ಷರಾದ ವಿಶ್ವನಾಥ ಬಂಗೇರ ತೆಂಗಿನ ಕಾಯಿ ಒಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಶಿಶು, ಬಾಲ, ಯುವ, ತರುಣ, ಹಿರಿಯ ಎಂಬ ಐದು ವಿಭಾಗಗಳಲ್ಲಿ ವಿವಿಧ ಮನರಂಜನೀಯ ಕ್ರೀಡಾಕೂಟ ನಡೆಯಿತು. ಸಮಾರೋಪದ ಅಧ್ಯಕ್ಷತೆಯನ್ನು ನಾಗರಾಜ ಕೆ ಎಸ್ ವಹಿಸಿದ್ದರು.
ಆರೋಗ್ಯ ಸುರಕ್ಷಾಧಿಕಾರಿ ರೋಹಿಣಿ ಶ್ರೀಧರ್ ಬಹುಮಾನ ವಿತರಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಯತೀನ್ ಕುಮಾರ್ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಕಾರ್ಯದರ್ಶಿ ರಾಜೇಶ್ ಕೆ ಉಪಸ್ಥಿತರಿದ್ದರು ಯತಿನ್ ಕುಮಾರ್ ಪ್ರಾಸ್ತವಿಕವಾಗಿ ಮಾತಾಡಿ ಸ್ವಾಗತಿಸಿ ವಜ್ರನಾಥ್ ಕಲ್ಲಡ್ಕ ಧನ್ಯವಾದ ಅರ್ಪಿಸಿದರು ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
| ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಮಾಹಿತಿ ಕಾರ್ಯಕ್ರಮ (more…)