ಕೇವಲ ಎರಡು ವರ್ಷ ಒಂಭತ್ತು ತಿಂಗಳ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದೈಪಲ ನಿವಾಸಿ ಯಾದವ ಕುಲಾಲ್ ಮತ್ತು ವಿಜಯಲಕ್ಷ್ಮೀ ದಂಪತಿಯ ಪುತ್ರಿ ಪ್ರಾದ್ಯಾ ವೈ. ಕುಲಾಲ್ ಶ್ಲೋಕ, ಭಕ್ತಿಗೀತೆ ಗಾಯನ ವೈಭವ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. ಬಂಟ್ವಾಳ ದೈಪಲದ ಯಾದವ ಕುಲಾಲ್ ಮತ್ತು ವಿಜಯಲಕ್ಷ್ಮೀ ದಂಪತಿಯ ಎರಡನೇ ಪುತ್ರಿ ಪ್ರಾಧ್ಯಾ.
ಕೇವಲ 2 ವರ್ಷ 9 ತಿಂಗಳ ವಯಸ್ಸಿನಲ್ಲಿಯೇ (ಜನನ: 11 ನವೆಂಬರ್ 2023), 5 ಸಂಸ್ಕೃತ ಶ್ಲೋಕಗಳನ್ನು ಈಕೆ ಪಠಿಸಿ ಗಮನ ಸೆಳೆದಿದ್ದಾಳೆ. ಗಣಪತಿ, ಶ್ರೀರಾಮ, ಭದ್ರಕಾಳಿ ಹಾಗೂ ಶಾರದಾ ದೇವಿಯ ಸ್ತುತಿ ಶ್ಲೋಕಗಳನ್ನು ಸುಲಲಿತವಾಗಿ ಪಠಿಸುತ್ತಾಳೆ. ಕನ್ನಡ ಹಾಗೂ ತುಳು ಭಾಷೆಯ ಒಟ್ಟು 4 ಭಕ್ತಿಗೀತೆಗಳನ್ನು ಸ್ಪಷ್ಟವಾಗಿ ಗಾಯನ ಮಾಡುತ್ತಾಳೆ. ಈ ಅಸಾಧಾರಣ ಸಾಧನೆಯನ್ನು ಪರಿಶೀಲಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಆಕೆಯನ್ನು ಅಧಿಕೃತವಾಗಿ ಐಬಿಆರ್ ಅಛೀವರ್ ಎಂದು ಘೋಷಿಸಿ ಪ್ರಮಾಣಪತ್ರ ಹಾಗೂ ಪದಕ ನೀಡಿ ಗೌರವಿಸಿದೆ. ಪ್ರಸ್ತುತ ಬಾಲಕಿ ಎಸ್.ವಿ.ಎಸ್ ವಿದ್ಯಾಗಿರಿ ಶಾಲೆಯಲ್ಲಿ ನರ್ಸರಿ ಕಲಿಯುತ್ತಿದ್ದಾಳೆ.
(more…)
| ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಮಾಹಿತಿ ಕಾರ್ಯಕ್ರಮ (more…)