ಕೈಕುಂಜೆ ಮುಖ್ಯರಸ್ತೆ ಅಭಿವೃದ್ಧಿ, ಅಂಗನವಾಡಿ ಕಟ್ಟಡ ಶೀಘ್ರ ನಿರ್ಮಾಣ: ಶಾಸಕರಿಗೆ ಮನವಿ ಸಲ್ಲಿಸಿದ ಸ್ಥಳೀಯರು
ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ.ಸಿ.ರೋಡಿನ ಕೈಕುಂಜ ನಿವಾಸಿಗಳ ಸಂಘಟನೆಯಾದ, ‘ಶ್ರೀ ದೇವಿ ಫ್ರೆಂಡ್ಸ್ (ರಿ.)’ ಹಾಗೂ ಊರವರು, ಕ್ಷೇತ್ರದ ಪರಿಸರದ ಪ್ರಮುಖ ಮೂಲ ಸಮಸ್ಯೆಗಳ ಪರಿಹಾರಕ್ಕಾಗಿ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಸ್ತೆದುರಸ್ತಿ: ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿಯಿಂದ ರೈಲ್ವೆ ನಿಲ್ದಾಣದವರೆಗೆ ಸಾರ್ವಜನಿಕ ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಈ ರಸ್ತೆಯನ್ನು ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಹೈ-ಮಾಸ್ಟ್ದೀಪಅಳವಡಿಕೆ: ಕ್ಷೇತ್ರಂಜ ಜಂಕ್ಷನ್‌ನ ಶ್ರೀ ದೇವಿ ಕಟ್ಟೆಯ ಬಳಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಭಾಗದಲ್ಲಿ “ಹೈ-ಮಾಸ್ಟ್” (High-Mast) ದೀಪವನ್ನು ಅಳವಡಿಸಬೇಕು.
ಉಬ್ಬುಹಾಗೂಕಾನ್ವೆಕ್ಸ್ಮಿರರ್ಅಳವಡಿಕೆ: ನಾಗ ದೇವರ ಸಾನಿಧ್ಯದ ಬಳಿ (ಮೂರು ದಾರಿ ಸಂಧಿಸುವ ಜಾಗ) ಈ ಹಿಂದೆಯೂ ಹಲವಾರು ಬಾರಿ ಅಪಘಾತಗಳು ಸಂಭವಿಸಿವೆ. ಪಾದಚಾರಿಗಳು ಹಾಗೂ ವಾಹನ ಸವಾರರ ಸುರಕ್ಷತೆಗಾಗಿ ಈ ಸ್ಥಳದಲ್ಲಿ ಒಂದು ದರ್ಪಣವನ್ನು (Convex Mirror) ಕೂಡಲೇ ಅಳವಡಿಸಬೇಕು.
ಅಂಗನವಾಡಿ ಕಟ್ಟಡ ಶೀಘ್ರ ನಿರ್ಮಾಣ: ಕೈಕುಂಜೆ ಅಂಗನವಾಡಿ ಕಟ್ಟಡ ನಿರ್ಮಾಣ ಅರ್ಧದಲ್ಲೇ ನಿಂತಂತೆ ಕಾಣಿಸುತ್ತಿದ್ದು, ಶೀಘ್ರವಾಗಿ ಇದನ್ನು ಪೂರ್ಣಗೊಳಿಸಬೇಕು
ಸ್ಥಳೀಯ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಬೇಡಿಕೆಗಳಿಗೆ ಶಾಸಕರು ತುರ್ತಾಗಿ ಸ್ಪಂದಿಸಬೇಕೆಂದು ಶ್ರೀ ದೇವಿ ಫ್ರೆಂಡ್ಸ್ (ರಿ.) ಹಾಗೂ ಊರ ನಾಗರಿಕರು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ. ಪ್ರಮುಖರಾದ ಶಿವರಾಜ್ (ಬೊಳ್ಳಿ) ಕೈಕುಂಜೆ, ಪ್ರಶಾಂತ್, ಶಶಿಧರ ಕೈಕುಂಜೆ ಮತ್ತಿತರು ಹಾಜರಿದ್ದರು.
ಜಾಹೀರಾತು
ಜಾಹೀರಾತು
Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.