ಪ್ರಮುಖ ಸುದ್ದಿಗಳು

ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆಯವರಿಗೆ “ಯಕ್ಷತೀರ್ಥ ಸಂಘಟನಾ ಪ್ರಶಸ್ತಿ “

VNR GOLD
OPTIC WORLD
D.SHIVA BHAT JWELLERS

ನಾರಾವಿ ಸಮೀಪದ ನೂರಾಳ್ ಬೆಟ್ಟಿನ ಯಕ್ಷತೀರ್ಥ ಕಲಾಸೇವೆ ಸಂಘವು 6 ವರ್ಷಗಳಿಂದ ಪ್ರತೀ ವರ್ಷವೂ ಯಕ್ಷಗಾನ ಸಂಘಟಕರನ್ನು ಗುರುತಿಸಿ , ಯಕ್ಷತೀರ್ಥ ಸಂಘಟನಾ ಪ್ರಶಸ್ತಿ , ಚಿನ್ನದ ನಾಣ್ಯದೊಂದಿಗೆ ಅದ್ದೂರಿ ಸಂಮಾನ ಮಾಡುತ್ತಿದ್ದು, ಈ ವರ್ಷದ , 2026 ನೇ ಸಾಲಿನ 7 ನೇ ಯಕ್ಷತೀರ್ಥ ಸಂಘಟನಾ ಪ್ರಶಸ್ತಿ  , ಪೊಳಲಿಯ ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆಯವರಿಗೆ  ಘೋಷಣೆಯಾಗಿದೆ. ಇಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

31.12.1968 ರಲ್ಲಿ ಪೊಳಲಿ ಸಮೀಪದ ಅಮ್ಮುಂಜೆ ಎಂಬಲ್ಲಿ ವೆಂಕಪ್ಪ ಬೆಳ್ಚಡ – ಸುಶೀಲಾ ದಂಪತಿಗಳ ಸುಪತ್ರರಾಗಿ ಜನಿಸಿದ ಜನಾರ್ದನರು ಬಾಲ್ಯದಲ್ಲೇ ಯಕ್ಷಗಾನದ ಒಲವು ಹೊಂದಿದ್ದರು . ತಮ್ಮ ಪಿ.ಯು.ಸಿ. ವಿದ್ಯಾಭ್ಯಾಸ ಮುಗಿಸಿ ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೂಪರ್ ವೈಸರ್ ಆಗಿ ಉದ್ಯೋಗಕ್ಕೆ ಸೇರಿ ಪ್ರಸ್ತುತ 34 ವರ್ಷಗಳಿಂದಲೂ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ . ಆದರೂ , ಯಕ್ಷಗಾನದ ಸಂಘಟನೆ , ಸಂಯೋಜನೆಯಲ್ಲಿ ತೊಡಗಿಸಿಕೊಂಡು ಯಕ್ಷಗಾನದ ಸೇವೆಯನ್ನು ಮಾಡುತ್ತಿದ್ದಾರೆ . ಇಂದಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾಗಿರುವ ತನ್ನ ಕಿರಿಯ ಸಹೋದರರಾದ ಅಮ್ಮುಂಜೆ ಮೋಹನರನ್ನು ಯಕ್ಷಗಾನ ಕಲಾವಿದರನ್ನಾಗಿ ರೂಪಿಸುವಲ್ಲಿ ಜನಾರ್ದನರ ಪಾತ್ರ ದೊಡ್ಡದು . ಅಮ್ಮುಂಜೆ ಮೋಹನರು ಇಂದು ಕಟೀಲು ಮೇಳದಲ್ಲಿ ಪ್ರಧಾನ ಕಲಾವಿದರಾಗಿದ್ದಾರೆ . ಜನಾರ್ದನರು ಉತ್ತಮ ನಾಟಕ ಕಲಾವಿದರು , ಭಜನಾಕಾರರು , ಭಾಷಣಕಾರರೂ , ನಿರೂಪಕರೂ ಹೌದು . ಪೊಳಲಿ ಯಕ್ಷೋತ್ಸವ , ಪೊಳಲಿ ಯಕ್ಷ ಕಲಾ ಸಮಿತಿಗಳ ಮುಖ್ಯ ರೂವಾರಿಯಾಗಿದ್ದಾರೆ ‌.

ಇಡೀ ರಾತ್ರಿ ತಾಳಮದ್ದಳೆ ಕೂಟವನ್ನು 25 ವರ್ಷಗಳ ಕಾಲ ನಡೆಸಿದ ಪ್ರತಿಷ್ಠಿತ ” ಯಕ್ಷ ಮಿತ್ರರು ” ಕೈಕಂಬದ ಸಂಯೋಜಕರಾಗಿ ಹಲವಾರು ಕಲಾವಿದರನ್ನು ಯಕ್ಷರಂಗಕ್ಕೆ ಪರಿಚಯ ಮಾಡಿಸಿದ್ದಾರೆ .

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.