ಬಂಟ್ವಾಳ: ಪಾಣೆಮಂಗಳೂರು ಶ್ರೀಮತಿ ಲಕ್ಷ್ಮೀ ದೇವಿ ನರಸಿಂಹ ಪೈ ವಿದ್ಯಾಲಯದಲ್ಲಿ ಆಟಿಡೊಂಜಿ ದಿನ ನಡೆಯಿತು. ರಾಜ್ಯೋತ್ಸವ ಪುರಸ್ಕೃತರಾದ ಲೋಕಯ್ಯ ಶೇರ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಆಟಿ ತಿಂಗಳಲ್ಲಿ ಪ್ರಕೃತಿಯ ಬದಲಾವಣೆ ಜೊತೆಗೆ ತುಳುವರ ಜೀವನಕ್ರಮ ಮೊದಲು ಹೇಗಿತ್ತು ಎಂದು ವಿವರಿಸಿದರು.
ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಸುಬೋದ್ ಜಿ ಪ್ರಭು ವಹಿಸಿದ್ದರು. ಶಾಲಾ ಕಾರ್ಯದರ್ಶಿ ನರೇಂದ್ರ ಕುಡ್ವ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ವೇತಾ ಕಾಮತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಯೋಜಕರಾಗಿ ಚಿತ್ರಕಲಾ ಶಿಕ್ಷಕ ಯಶವಂತ್ ಸ್ನೇಹಗಿರಿ ಹಾಗೂ ಸ್ಮಿತಾ ಹರೀಶ್ ನಿರ್ವಹಿಸಿದರು.
ಶಾಲಾ ವಿದ್ಯಾರ್ಥಿ ಸಮರ್ಥ್ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು 10ನೇ ತರಗತಿಯ ವಿದ್ಯಾರ್ಥಿಗಳಾದ ವೀಕ್ಷ ಹಾಗೂ ಶಮಿತ್ ಅವರು ನಡೆಸಿಕೊಟ್ಟರು. ವಿರಾಜ್ ಧನ್ಯವಾದ ಸಮರ್ಪಿಸಿದರು.