ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಆರನೇ ವರ್ಷದ ಸಂಭ್ರಮದಲ್ಲಿರುವ ಬಂಟ್ವಾಳ ಬಸ್ತಿಪಡ್ಪುವಿನ ಅಗ್ನಿಶಾಮಕ ದಳ ಕಚೇರಿ ಎದುರು ‘ಭದ್ರಾ ಹೋಮ್ ಅಪ್ಲೈಯನ್ಸಸ್’ ಸಂಸ್ಥೆ ಗ್ರಾಹಕರಿಗಾಗಿ ಆಕರ್ಷಕ ‘ಫೆಸ್ಟಿವ್ ಧಮಾಕಾ ಸೇಲ್’ ಘೋಷಿಸಿದೆ.
ಮನೆಗೆ ಬೇಕಾದ ವಸ್ತುಗಳನ್ನು ಪ್ರಧಾನವಾಗಿಟ್ಟುಕೊಂಡು ಆರಂಭಗೊಂಡ ಮಾರಾಟ ಮಳಿಗೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಮಾರಾಟವನ್ನು ಆಯೋಜಿಸಿದೆ, ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ವಸ್ತುಗಳ ಖರೀದಿಯ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದ್ದು, ಗ್ರಾಹಕರು ಈ ವಿಶೇಷ ಸೇಲ್ನ ಸದುಪಯೋಗಪಡಿಸಿಕೊಳ್ಳಬಹುದು ಎಂದು ಮಾಲೀಕರಾದ ಮಂಜುನಾಥ ಆಚಾರ್ಯ ಮತ್ತು ಮೇಘಾ ಆಚಾರ್ಯ ತಿಳಿಸಿದ್ದಾರೆ. ಉತ್ತಮ ಗುಣಮಟ್ಟವನ್ನು ಹೊಂದಿರುವ ಗೃಹೋಪಯೋಗಿ ವಸ್ತುಗಳು ಇಲ್ಲಿ ದೊರೆಯುತ್ತಿದ್ದು, ಅತಿ ಕಡಿಮೆ ದರದಲ್ಲಿ ಮಾರಾಟಕ್ಕಿದೆ.
ವಿಶೇಷತೆಗಳೇನು?
ಬಂಪರ್ ಬಹುಮಾನ: ಅದೃಷ್ಟಶಾಲಿ ಗ್ರಾಹಕರಿಗೆ ಬಂಪರ್ ಬಹುಮಾನವಾಗಿ 40 ಗ್ರಾಂ ಚಿನ್ನ ಗೆಲ್ಲುವ ಅವಕಾಶವಿದೆ.ಖಚಿತ ಉಡುಗೊರೆ ಮತ್ತು ಕೂಪನ್: ಪ್ರತಿ ಖರೀದತಿಗೂ ಖಚಿತ ಉಡುಗೊರೆ ಲಭ್ಯವಿದ್ದು, ಪ್ರತಿ ರೂ. 2,000ರ ಖರೀದಿಗೆ ಕೂಪನ್ ಕೊಡುಗೆಯನ್ನು ನೀಡಲಾಗಿದೆ.ಸುಲಭ ಕಂತುಗಳು ಮತ್ತು ಕ್ಯಾಶ್ಬ್ಯಾಕ್: ಬಜಾಜ್ ಫಿನ್ಸರ್ವ್, ಎಚ್ಡಿಬಿ ಫೈನಾನ್ಶಿಯಲ್ ಸರ್ವೀಸಸ್ ಹಾಗೂ ಮೂಲಕ ಸುಲಭ ಮಾಸಿಕ ಕಂತುಗಳಲ್ಲಿ ಮನೆಗೆ ಅಗತ್ಯವಿರುವ ವಸ್ತುಗಳನ್ನು ಕೊಂಡೊಯ್ಯಬಹುದು. ಇದರೊಂದಿಗೆ ಆಕರ್ಷಕ ಕ್ಯಾಶ್ಬ್ಯಾಕ್ ಕೊಡುಗೆಗಳೂ ಸಹ ಲಭ್ಯವಿವೆ.