ಬಂಟ್ವಾಳ: ನಲ್ಕೆಮಾರ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಂಪನ್ನಗೊಂಡಿತು.
ಅಮ್ಟಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯರಾಮ್ ತಲೆಂಬಿಲ, ಸಿ.ಆರ್.ಪಿ ರವಿ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದಾಮೋದರ ಏರ್ಯ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಜ್ಯೋತಿ ಉಪಸ್ಥಿತರಿದ್ದರು.
ಏರ್ಯ ಆಳ್ವ ಫೌಂಡೇಶನ್ ಸದಸ್ಯ ಅಭಿನಂದನ್ ನಾಥ್ ಹಾಜರಿದ್ದರು. ಕ್ಲಸ್ಟರ್ ನ 16 ಶಾಲೆಗಳ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು. ತೀರ್ಪುಗಾರಾರಿಗೆ ಗೌರವ ಪುರಸ್ಕಾರ ನೀಡಲಾಯಿತು. ನಲ್ಕೆಮಾರ್ ಶಾಲೆ 4 ಪ್ರಥಮ 3 ದ್ವಿತೀಯ ಹಾಗೂ 3 ತೃತೀಯ ಬಹುಮಾನ ಗಳಿಸಿತು. ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕರಾಧ ಮೋಹಿನಿ ವಂದಿಸಿದರು, ರೇಖಾ ರಾವ್ ಕಾರ್ಯಕ್ರಮ ನಿರೂಪಿಸಿದರು.