ಜಮೀಯ್ಯತುಲ್ ಫಲಹ್ ಬಂಟ್ವಾಳ ತಾಲೂಕು ಘಟಕದ ವಾರ್ಷಿಕ ಮಹಾಸಭೆ ಶುಕ್ರವಾರ ಲಯನ್ಸ್ ಸೇವಾ ಮಂದಿರದಲ್ಲಿ ಅಧ್ಯಕ್ಷ ಅಬ್ಬಾಸ್ ಅಲಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 37 ಅಜೀವ ಸದಸ್ಯರು ಭಾಗವಹಿಸಿದ್ದರು. ಜಿಲ್ಲಾ ವೀಕ್ಷಕರಾಗಿ ಇಬ್ರಾಹಿಂ ಕೊಡಿಜಾಲ್ ಹಾಗೂ ವಿ. ಇಬ್ರಾಹಿಂ ನಡುಪದವು ಉಪಸ್ಥಿತರಿದ್ದು, ಸಂಘಟನೆಯ ಕಾರ್ಯಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು.
ಆಶಿಕ್ ಕುಕ್ಕಾಜೆ ಅವರ ಪವಿತ್ರ ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಿ.ಎಂ. ತುಂಬೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಹಕೀಮ್ ಕಲಾಯಿ ವಾರ್ಷಿಕ ವರದಿ ಮಂಡಿಸಿದರೆ, ಕೋಶಾಧಿಕಾರಿ ಲತೀಫ್ ನೆರಳಕಟ್ಟೆ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆದರು.
ಬಳಿಕ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಜೀವ ಸದಸ್ಯರ ಏಳು ಮಕ್ಕಳನ್ನು ಹಾಗೂ ಅವರ ಪೋಷಕರನ್ನು ಅಭಿನಂದಿಸಲಾಯಿತು.
ಮಸೀದಿ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ ಹಜಾಜ್ ಗ್ರೂಪ್ ಪರವಾಗಿ ಹನೀಫ್ ಹಾಜಿ ಅವರನ್ನು ಹಾಗೂ ರೋಟರಿ ಬಂಟ್ವಾಳ ನಗರ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಂಝ ಬಸ್ತಿಕೋಡಿ ಅವರನ್ನು ಸನ್ಮಾನಿಸಲಾಯಿತು. ರಝಾಕ್ ಮಾಸ್ಟರ್ ಅನಂತಾಡಿ ನಿರೂಪಿಸಿದರು. ಇಕ್ಬಾಲ್ ಫರಂಗಿಪೇಟೆ ವಂದಿಸಿದರು. ಸ್ವಲಾತ್‌ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.