ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕ ಲಿಂಗಪ್ಪ ಬಿ ಹಾಗೂ ಅವರ ಪತ್ನಿ ಬಿ.ಮೂಡ ಶಾಲೆಯ ಶಿಕ್ಷಕಿ ಸುಶೀಲಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭ ವಲಯದ ಅಧ್ಯಕ್ಷ ರಾದ ರಾಜೇಂದ್ರ ಕೆ. ಗೌರವಾಧ್ಯಕ್ಷರಾದ ಕಿಶೋರ್. ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಕೋಶಾಧಿಕಾರಿ ಕೃಷ್ಣ ರಾಜ್ ರಾವ್ ವಲಯದ ಮಾಜಿ ಅಧ್ಯಕ್ಷರುಗಳಾದ ಟಿ ಹರೀಶ್ ರಾವ್, ಸುಕುಮಾರ್, ಉಪಾಧ್ಯಕ್ಷರಾದ ಹರೀಶ್ ನಾಟಿ, ಸದಸ್ಯ ರಾದ ವಿಕೇಶ್ ರವರು ಉಪಸ್ಥಿತರಿದ್ದರು.