ಬಂಟ್ವಾಳ

ಮಳೆಗಿಂತ ಜಾಸ್ತಿ ಗಾಳಿ, ಹಲವೆಡೆ ಹಾನಿ, ಮಾಣಿ ಶಾಲೆಯ ತಡೆಗೋಡೆಗೂ ಹಾನಿ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಸೋಮವಾರ ಮಳೆಗಿಂತ ಜಾಸ್ತಿ ಗಾಳಿಯ ಅಬ್ಬರ ಕಂಡುಬಂದಿದ್ದು ಈ ಹಿನ್ನೆಲೆ ಹಲವೆಡೆ ಹಾನಿ ಸಂಭವಿಸಿದೆ.

ಬಾಳ್ತಿಲ ಗ್ರಾಮದ ಕುರ್ಪೆ ಮನೆಯ ಜೂಲಿಯಾನಾ ಪಾಯ್ಸ್ , ಚಾರ್ಲಿ ವೇಗಸ್ ಮನೆಯ ಮೇಲೆ ಮರ ಬಿದ್ದು ಮನೆಗೆ ಬಾಗಶ ಹಾನಿಯಾಗಿದೆ.  ಬಾಳ್ತಿಲ ಗ್ರಾಮದ ಬಿ.ಆರ್.ನಗರದ ನಾರಾಯಣ ನಾಯ್ಕ ಮನೆ ಮೇಲೆ ಮರ ಬಿದ್ದು ಮನೆಗೆ ಬಾಗಶಃ ಹಾನಿಯಾಗಿದೆ. ಗೋಳ್ತಮಜಲು ಕೆ ಸಿ ರೋಡ್ ಎಂಬಲ್ಲಿ ಶೇಖರ ಪೂಜಾರಿ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಆಗಿದೆ.

VNR GOLD

ಗೋಳ್ತಮಜಲು ಗ್ರಾಮದ ಬಲ್ಲೆಕೋಡಿ ಎಂಬಲ್ಲಿ ಜೋಹರ ಅವರ  ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಆಗಿದೆ. ನರಿಕೊಂಬು ಗ್ರಾಮದ ಕೆದ್ದೇಲು ಎಂಬಲ್ಲಿ ಲೀಲಾವತಿ ಅವರ ವಾಸ್ತವ್ಯದ  ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.  ಬಡಗಕಜೆಕಾರು ಗ್ರಾಮದ ಮಡವು ಎಂಬಲ್ಲಿ ಮೀನಾಕ್ಷಿ ಪೂಜಾರಿ ಅವರ ಮನೆಗೆ ಗಾಳಿಯಿಂದ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ.

ಜಾಹೀರಾತು

ಬಾಳ್ತಿಲ ಗ್ರಾಮದ ದಾಸಕೋಡಿ ಮನೆಯ ನಾರಾಯಣ ಮೂಲ್ಯರವರ ಅಡಿಕೆ ತೋಟಕ್ಕೆ ಇವತ್ತಿನ ಗಾಳಿ ಮಳೆಯಿಂದ ಬಾಗಶಃ ಹಾನಿಯಾಗಿರುತದೆ.

ಕಡೇಶ್ವಾಲ್ಯ ಗ್ರಾಮದ ಅಳಕೆ ಎಂಬಲ್ಲಿ ಚಂದ್ರಾವತಿ ಶೆಟ್ಟಿ ಯವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ, ದ. ಕ.ಜಿ. ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿಯ ಶಾಲೆ ಹಿಂಬದಿಯ ಬರೆ ಜರಿದು ಶಾಲಾ ಕಟ್ಟಡಕ್ಕೆ ತಾಗಿರುತ್ತದೆ ಹಾಗೂ ಶಾಲೆಯ ತಡೆಗೋಡೆಗೆ ಹಾನಿಯಾಗಿರುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.