ದೀರ್ಘಾವಧಿ (4399ದಿನಗೆ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯುಷ್ಯ ಮತ್ತು 2047ರ ವಿಕಸಿತ ಭಾರತದ ಸಂಕಲ್ಪ ಸಾಧನೆಯ ಯಶಸ್ಸಿಗೆ ಭಾರತೀಯ ಜನತಾ ಪಾರ್ಟಿ ಸಜಿಪಮುನ್ನೂರು ಮಹಾಶಕ್ತಿ ಕೇಂದ್ರದ ಪ್ರಮುಖರು ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟೇಶ್ ನಾವಡ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವಪ್ಪ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು, ಪ್ರಮುಖರಾದ ಸುಭಾಷ್ ಚಂದ್ರ ನಾಯಕ್ ಉಳಿಪಾಡಿಗುತ್ತು, ಕೃಷ್ಣರಾಜ್ ಮಾರ್ಲ ಮುತ್ತೂರು, ಯಶವಂತ ಪೊಳಲಿ, ಯಶೋಧರ ಪೊಳಲಿ, ಲೋಕೇಶ್ ಭರಣಿ, ವಾಮನ ಆಚಾರ್ಯ, ಕಾರ್ತಿಕ್ ಬಳ್ಳಾಲ್, ಲೋಕೇಶ್ ಪಲ್ಲಿಪಾಡಿ, ಕೃಷ್ಣ ಪೊಳಲಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.