ಬಂಟ್ವಾಳ: ಸುದೀರ್ಘ ಅವಧಿಯಲ್ಲಿ ಪ್ರಧಾನಿಯಾಗಿ ಮುಂದುವರಿದು ಇನ್ನಷ್ಟು ದೀರ್ಘಾವಧಿ ಅಧಿಕಾರ ನಡೆಸಲು ಶಕ್ತಿ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಯುರಾರೋಗ್ಯ ವರ್ಧನೆಗಾಗಿ ಕಲ್ಲಡ್ಕ ಸಮೀಪ ನೆಟ್ಲ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆಯನ್ನು ಬಿಜೆಪಿ ವತಿಯಿಂದ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಬೈದರಡ್ಕ, ಓಬಿಸಿ ಮೋರ್ಚಾ ಜಿಲ್ಲಾ ಪ್ರಮುಖರಾದ ಗೋಪಾಲ ಪೂಜಾರಿ, ಬಂಟ್ವಾಳ ಯುವಮೋರ್ಚಾ ಕಾರ್ಯದರ್ಶಿ ಕೌಶಿಲ್ ಶೆಟ್ಟಿ, ಓಬಿಸಿ ಮಂಡಲ ಕಾರ್ಯದರ್ಶಿ ಯತೀಶ್ ಮೂಳೀಕೊಡಂಗೆ, ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಕುಮಾರ್, ಬೂತ್ ಅಧ್ಯಕ್ಷರಾದ ಮಹಾಬಲ ಸಾಲಿಯನ್ ಮೂಳಿಕೊಡಂಗೆ, ಶೇಖರ್ ಕೊಟ್ಟಾರಿ ಅಮ್ಟೂರು, ಕಾರ್ಯದರ್ಶಿಗಳಾದ ಸಂದೀಪ್ ಶೆಟ್ಟಿ ಬೈದರಡ್ಕ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆನಂದ ಎ ಶಂಭೂರು, ಜಿಲ್ಲಾ ಓ.ಬಿ.ಸಿ ಮೋರ್ಚಾದ ಪ್ರಮುಖರಾದ ಚಿದಾನಂದ ಪಟ್ಟೆಕೋಡಿ. ವಾಣಿ ಶೆಟ್ಟಿ. ಪ್ರಮುಖರಾದ ಉಮೇಶ್ ಟಿ ಪೂಜಾರಿ ಜೀತೇಶ್ ಶೆಟ್ಟಿ ಬಾಳಿಕೆ , ಪವನ್ ಶೆಟ್ಟಿ ಬಾಳಿಕೆ ಪ್ರಮುಖರು ಉಪಸ್ಥಿತರಿದ್ದರು