ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಲೆ ಸೇವೆ ಆಗಸ್ಟ್ 13ರಿಂದ ಆರಂಭಗೊಂಡು ಸೆ.11ರವರೆಗೆ ನಡೆಯಲಿದೆ. ಶತಮಾನಗಳಿಂದ ಈ ಸೇವೆ ನಡೆಯುತ್ತಿರುವುದು ವಿಶೇಷ. ಸೇವೆಯಲ್ಲಿ ಭಾಗವಹಿಸಲು ಇಚ್ಛಿಸುವ ಯಕ್ಷಗಾನ ತಂಡಗಳು ತಮಗೆ ಅನುಕೂಲವಾದ ಕನಿಷ್ಠ 5 ದಿನಗಳನ್ನು ತಿಳಿಸಿದಲ್ಲಿ ಒಂದು ದಿನವನ್ನು ಆಯ್ಕೆ ಮಾಡಿ ತಿಳಿಸಲಾಗುವುದು. ಯಾವುದೇ ವೆಚ್ಚ ಕೊಡಲ್ಪಡುವುದಿಲ್ಲ. ಯಕ್ಷಗಾನ ಸಾಹಿತ್ಯ ಲಭ್ಯವಿದೆ. ಸೇವೆಯ ಸಮಯ ಸಂಜೆ 6.30ರಿಂದ 9.30ರವರೆಗೆ ಇರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9071923352 ಅಥವಾ 9481390149 ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.