ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಬುಧವಾರ ಜರಗಿತು. ಈ ಸಂದರ್ಭ ಜನಜಾಗೃತಿ ವೇದಿಕೆಯ ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ವಹಿಸಿದ್ದರು. ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಎ ಸಿ ಭಂಡಾರಿ ಉದ್ಘಾಟಿಸಿದರು.
ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಜನಜಾಗೃತಿ ವೇದಿಕೆಯ 2026-27 ನೇ ಸಾಲಿನ ಕ್ರಿಯಾಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ನೀಡಿ ವಾರ್ಷಿಕವಾಗಿ ಜಿಲ್ಲೆಯಲ್ಲಿ ಒಟ್ಟು 8 ಮದ್ಯವರ್ಜನ ಶಿಬಿರಗಳ ಆಯೋಜನೆ ಹಾಗೂ 180 ಶಾಲಾ ಕಾಲೇಜುಗಳಲ್ಲಿ ಸ್ವಾಸ್ಯ ಸಂಕಲ್ಪ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ದುಶ್ಚಟಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು
ಆಯ್ಕೆಗೊಂಡ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರನ್ನು ಹಾಗೂ 2025 26 ನೇ ಸಾಲಿನಲ್ಲಿ ವಿಶೇಷ ಸಾಧನೆ ಮಾಡಿದ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರನ್ನು ಗೌರವಿಸಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಕಾರಂತ್, ನಿಕಟಪೂರ್ವ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ, ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ಅವರನ್ನು ವಿಶೇಷವಾಗಿ ಅಭಿನಂದಿಸಿ ಗೌರವಿಸಲಾಯಿತು. ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾ ಅಧ್ಯಕ್ಷರುಗಳಾದ ಸಾಜ ರಾಧಾಕೃಷ್ಣ ಆಳ್ವ, ಮಹಮ್ಮದ್ ಇಸ್ಮಾಯಿಲ್, ಎನ್.ಎ ರಾಮಚಂದ್ರ, ಜಿಲ್ಲಾ ಉಪಾಧ್ಯಕ್ಷರಾದ ಶಾರದಾ ರೈ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷರಾಧ ಬೆಳ್ತಂಗಡಿಯ ಗಿರೀಶ್ ಕೆಎಸ್, ಮಂಗಳೂರಿನ ಸುಖಲತಾ ಶೆಟ್ಟಿ, ಮೂಡಬಿದ್ರೆಯ ವಾಸುದೇವ ನಾಯಕ್, ಬಂಟ್ವಾಳದ ರಾಜಾರಾಮ್ ಶೆಟ್ಟಿ, ಪುತ್ತೂರಿನ ಸತೀಶ್ ನಾಯ್ಕ, ಮಂಜೇಶ್ವರದ ಮಂಜುನಾಥ ಆಳ್ವಾ, ಕಾಸರಗೋಡಿನ ಜಯರಾಮ ಪಾಠಾಳಿ, ಕಡಬದ ಇಂದುಶೇಖರ್ ಶೆಟ್ಟಿ, ಸುಳ್ಯದ ವೆಂಕಪ್ಪ ಗೌಡ, ಹಾಗೂ ತಾಲೂಕುವಾರು ನಿಕಟಪೂರ್ವ ಅಧ್ಯಕ್ಷರಾಧ ಕಾಸಿಂ ಮಲ್ಲಿಗೆ ಮನೆ, ಚಂದ್ರಶೇಖರ್ ಉಚ್ಚಿಲ, ಸುಭಾಷ್ ಚಂದ್ರ ಚೌಟ, ರೊನಾಲ್ಡ್ ಡಿಸೋಜ, ಲೋಕೇಶ್ ಹೆಗ್ಡೆ ಉರ್ಲಾ0ಡಿ, ಜಯಪ್ರಕಾಶ್ ನಾರಾಯಣ್ ತೊಟ್ಟೆತೋಡಿ, ಅಖಿಲೇಶ್ ನಗುಮೊಗಂ, ಮಹೇಶ್ ಕೆ ಸವಣೂರು, ಲೋಕನಾಥ ಅಮೆಚೂರು ಹಾಗೂ ಜಿಲ್ಲಾ ಸದಸ್ಯರು ಭಾಗವಹಿಸಿದ್ದರು.
ಜನಜಾಗೃತಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ನಿರ್ದೇಶಕರಾದ ದಿನೇಶ್ ಡಿ ಸ್ವಾಗತಿಸಿ, ಜಿಲ್ಲೆ ಎರಡರ ನಿರ್ದೇಶಕ ಬಾಬು ನಾಯ್ಕ್ ಗತ ಸಭೆಯ ವರದಿ ವಾಚಿಸಿದರು. ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ ವಂದಿಸಿದರು ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು