ಬಂಟ್ವಾಳ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಒಡ್ಡೂರು ಫಾರ್ಮ್ಸ್ ನಲ್ಲಿ ನಡೆದ ವಿಶೇಷ ಯೋಗ ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಭಾಗವಹಿಸಿದರು.
ಯೋಗವು ಭಾರತದ ಪ್ರಾಚೀನ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಆರೋಗ್ಯವಂತ ಹಾಗೂ ಸಮತೋಲನಯುತ ಜೀವನಕ್ಕೆ ಯೋಗವೇ ಅತ್ಯುತ್ತಮ ಮಾರ್ಗ ಎಂದು ತಿಳಿಸಿದರು. ಯೋಗವನ್ನು ಪ್ರತಿದಿನದ ಜೀವನದ ಭಾಗವಾಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದರು.ಈ ಸಂದರ್ಭ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಭರತ್ ಜೈನ್, ಮಂಗಳೂರು ಬಿಜೆಪಿ ನಗರ ಉತ್ತರ ಮಂಡಲದ ಕಾರ್ಯದರ್ಶಿ ಸಚಿನ್ ಅಡಪ, ಯಶವಂತ ಕೋಟ್ಯಾನ್, ರೋಹಿತ್ ಶೆಟ್ಟಿ ಮಿಜಾರ್, ಗೀತೆಶ್ ಉಪಸ್ಥಿತರಿದ್ದರು.