ಬಂಟ್ವಾಳ

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಜಮಿಯತುಲ್ ಫಲಾಹ್ ಬಂಟ್ವಾಳ ಘಟಕ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ  ಬಿ.ಸಿ.ರೋಡ್ ಲಯನ್ಸ್ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ಅಬ್ಬಾಸ್ ಆಲಿ ವಹಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅಭಿನಂದನಾ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ದ.ಕ. ಶಾಲಾ‌ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ಧೇಶಕ ಶಶಿಧರ್ ಜಿ., ಡಯಟ್ ಮಂಗಳೂರು ಹಿರಿಯ ಉಪನ್ಯಾಸಕಿ ಫಾತಿಮಾ‌ ಬಿ., ಜೆ.ಎಫ್.ಸಿ.ಸಿ. ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಹನೀಫ್ ಮಾಸ್ಟರ್, ಅಜೀವ ಸದಸ್ಯರಾದ ಹನೀಫ್ ಹಾಜಿ ಗೋಳ್ತಮಜಲು, ಮೊಹಮ್ಮದ್‌ ಇಸಾಕ್ ಅರ್ಕುಳ, ಟಿ.ಮಹಮ್ಮದ್ ಟೋಪ್ಕೋ, ಖಜಾಂಜಿ ಅಬ್ದುಲ್ ಲತೀಫ್ ನೇರಳಕಟ್ಟೆ ವೇದಿಕೆಯಲ್ಲಿದ್ದರು.

VNR GOLD

ಲೆಕ್ಕಪರಿಶೋಧಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ‌ ಕುಕ್ಕಾಜೆ ನಿವಾಸಿ ಮೊಹಮ್ಮದ್ ಶಿಹಾಬುದ್ದೀನ್ ಕುಕ್ಕಾಜೆ ಅವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ಘಟಕದ ಎಂ.ಎಚ್.ಇಕ್ಬಾಲ್, ಪಿ. ಮೊಹಮ್ಮದ್, ಮೊಹಮ್ಮದ್‌ ನಾರಂಕೋಡಿ, ಮೊಹಮ್ಮದ್‌ ರಫೀಕ್ ಹಾಜಿ ಆಲಡ್ಕ, ಶೇಖ್ ರಹಮತುಲ್ಲಾಹ್, ಬಿ.ಎ.ಮೊಹಮ್ಮದ್‌ ನೀಮಾ, ಅಬ್ದುಲ್ ಕರೀಂ ಕೋಟೆಕಣಿ, ಇಬ್ರಾಹಿಂ ಮೊಯಿದಿನ್ ನಂದಾವರ, ರಶೀದ್ ವಿಟ್ಲ, ಶಾಕಿರ್ ಅಳಕೆಮಜಲು, ವಿ.ಎಚ್.ಅಶ್ರಫ್, ಹರ್ಷದ್ ಸರವು ಮತ್ತಿತರರು ಉಪಸ್ಥಿತರಿದ್ದರು. ಕೆ.ಎಸ್.ಮೊಹಮ್ಮದ್‌ ಕಿರಾತ್‌ ಪಠಿಸಿದರು, ಹಕೀಂ ಕಲಾಯಿ ಸ್ವಾಗತಿಸಿದರು, ಅಹ್ಮದ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು,‌ ಆಶಿಕ್ ಕುಕ್ಕಾಜೆ ವಂದಿಸಿದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.