ಬಂಟ್ವಾಳ: ಶೃಂಗೇರಿ ಶ್ರೀ ಶಂಕರ ಮಠ ಶ್ರೀ ಶಾಂಕರ ತತ್ವ ಅಭಿಯಾನಂ, ಮಂಗಳೂರು ಕೋಟೆಕಾರು ಶ್ರೀ ಶಂಕರ ಸೇವಾ ಪ್ರತಿಷ್ಠಾನ ಹಾಗೂ ಬಂಟ್ವಾಳ ತಾಲೂಕು ಘಟಕ , ಮೇಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಹಾಗೂ ವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಚಾರ್ಯ ಶ್ರೀ ಶಂಕರ ಭಗವತ್ಪಾದರ ಜಯಂತ್ಯುತ್ಸವದ ಅಂಗವಾಗಿ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಕಾರ್ಯಕ್ರಮ ಮೇ 15ರಿಂದ ಮೇ 21 ರವರೆಗೆ ನಡೆಯಲಿದೆ.
ಮೇ 15ರಂದು ಸಂಜೆ ಕಾವಳಕಟ್ಟೆ ಜಯಪ್ರಕಾಶ್ ರಾವ್ ಅವರ ನಿವಾಸದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದ್ದು, ಕೊಟೆಕಾರು ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಉದ್ಘಾಟಿಸಲಿರುವರು . ಮೇ 16 ರಂದು ಬಿ.ಸಿ.ರೋಡ್ ರಾಜ ಮಣಿ ರಾಮಕುಂಜ ಅವರ ನಿವಾಸದಲ್ಲಿ , ಮೇ 17ರಂದು ಕನ್ಯಾನಶಿವರಾಮ ರಾವ್ ಬರಿಕಟ್ಟೆಯಲ್ಲಿ, ಮೇ 18 ಕಲಾಶ್ರಯ ದಾಸಕೋಡಿಯಲ್ಲಿ, ಮೇ 19 ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದಲ್ಲಿ, ಮೇ 20ರಂದು ಪೊಳಲಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ , ಮೇ 21ರಂದು ಸಮಾರೋಪ ನಡೆಯಲಿದ್ದು, ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಸಮಿತಿ ಪ್ರಕಟನೆ ತಿಳಿಸಿದೆ.