ಬಂಟ್ವಾಳ: ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 91.35 ಶೇ. ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ 81 ವಿದ್ಯಾರ್ಥಿಗಳು ಹಾಜರಾಗಿದ್ದು, 74 ವಿದ್ಯಾರ್ಥಿಗಳು ಉತ್ತೀರ್ಣರಾಗಿ 6 ಡಿಸ್ಟಿಂಕ್ಷನ್, 44 ಫಸ್ಟ್ ಕ್ಲಾಸ್ , 13 ಸೆಕೆಂಡ್ ಕ್ಲಾಸ್, 11 ಉತ್ತೀರ್ಣರಾಗಿದ್ದಾರೆ.
ಶ್ರಾವ್ಯ 603 ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ನವ್ಯ 576, ತ್ರಿಶಾ 562, ಡಿವಿಷಾ 553, ಮುಫಿದಾ ಬಾನು 537, ಪ್ರಹ್ಲಾದ ಜೆ. ಪ್ರಭು 532 ಅಂಕ ಹಾಗೂ ಸಂಸ್ಕೃತದಲ್ಲಿ 16 ವಿದ್ಯಾರ್ಥಿಗಳು 125/125 ಅಂಕಗಳನ್ನು ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.