ಬಂಟ್ವಾಳ: ಪಾಣೆಮಂಗಳೂರು ಎಸ್.ಎಲ್.ಎನ್.ಪಿ. ( ಶ್ರೀಮತಿ ಲಕ್ಷ್ಮೀದೇವಿ ನರಸಿಂಹ ಪೈ ವಿದ್ಯಾಲಯ) ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. 52 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು, 18 ವಿಶಿಷ್ಟ ಶ್ರೇಣಿಯಲ್ಲಿ, 26 ಪ್ರಥಮ ಶ್ರೇಣಿ ಹಾಗೂ 8 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಶಾಲೆಗೆ ಎ ಗ್ರೇಡ್ ಫಲಿತಾಂಶ ದೊರಕಿದೆ. ಧೃತಿ ವಿ.ವೈ. 597 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಭವಿತಾ 590 ಅಂಕ ಗಳಿಸಿ ದ್ವಿತೀಯ ಹಾಗೂ ಭಾರ್ಗವ ಯು.ಕೊಟ್ಟಾರಿ ಮತ್ತು ದಿಶಾ ಆರ್. ಶೆಟ್ಟಿ 588 ಅಂಕ ಗಳಿಸಿ ತೃತಿಯ ಸ್ಥಾನಿಯಾಗಿದ್ದಾರೆ, ಎಲ್ಲರನ್ನೂ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಶಿಕ್ಷಕ, ಶಿಕ್ಷಕೇತರ ವೃಂದ ಅಭಿನಂದಿಸಿರುವುದಾಗಿ ಪ್ರಕಟಣೆ ತಿಳಿಸಿದೆ.