ಬೊಂಡಾಲದ ಉತ್ಸಾಹಿ ತರುಣ ವ್ರೃಂದ (ರಿ) ಬೊಂಡಾಲ ಹಾಗೂ ಕಾಮತ್ ಒಪ್ಟಿಕಲ್ಸ್ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ತಪಾಸಣಾ ಶಿಬಿರ ಉಚಿತವಾಗಿ ನಡೆಯಿತು.
ಭಾನುವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆದ ಶಿಬಿರಕ್ಕೆ ಊರ ಹಾಗೂ ಸುತ್ತಮುತ್ತಲಿನ ಹಲವಾರು ಮಂದಿ ಆಗಮಿಸಿ ಪ್ರಯೋಜನ ಪಡೆದುಕೊಂಡರು. ಬೊಂಡಾಲ ಶ್ರೀಮಹಾಗಣಪತಿ ದೇವಸ್ಥಾನದ ಆರ್ಚಕರಾದ ಶಿವಪ್ರಸಾದ್ ಭಟ್ ಉಧ್ಘಾಟಿಸಿದರು, ಉತ್ಸಾಹಿ ತರುಣ ವ್ರೃಂದ(ರಿ )ಬೊಂಡಾಲ ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಸರ್ವಸದಸ್ಯರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು