ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಭೆಯನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಹಾಗು ಘಟನೆಯ ಸಮಗ್ರ ತನಿಖೆಗೆ ಆಗ್ರಹಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ ಬಂಟ್ವಾಳ ತಾಲೂಕು ವತಿಯಿಂದ ಪ್ರತಿಭಟನೆ ಬಿಸಿರೋಡಿನಲ್ಲಿ ನಡೆಯಿತು.
ಮುಖಂಡರಾದ ನರಸಿಂಹ ಮಾಣಿ ಮತ್ತು ಪ್ರಸಾದ್ ಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಮುಖರಾದ ಪ್ರಶಾಂತ್ ಕೆಂಪುಗುಡ್ಡೆ, ಭರತ್ ಕುಮ್ಡೇಲು, ಸಮಿತ್ ರಾಜ್ ದರೆಗುಡ್ಡೆ, ಗುರುರಾಜ್ ಬಂಟ್ವಾಳ, ಸಂತೋಷ್ ಸರಪಾಡಿ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಸುದರ್ಶನ್ ಬಜ, ಪ್ರಭಾಕರ ಪ್ರಭು, ಗೋವಿಂದ ಪ್ರಭು, ಅನೂಪ್ ಮಯ್ಯ, ಚಿದಾನಂದ ಕುಜೀಲಬೆಟ್ಟು, ಸಂದೇಶ್ ಫರಂಗಿಪೇಟೆ, ಗಣೇಶ್ ಕಾಮಾಜೆ ಮತ್ತಿತರರು ಉಪಸ್ಥಿತರಿದ್ದರು.
(more…)