ಬಂಟ್ವಾಳ

ವಾಟ್ಸಾಪ್ ಮೂಲಕ ಷೇರ್ ಟ್ರೇಡಿಂಗ್: ಲಕ್ಷಾಂತರ ರೂ ವಂಚಿಸಿದ ಅಪರಿಚಿತರು

ಷೇರ್ ಟ್ರೇಡಿಂಗ್ ಗೆ ಹಣ ಹೂಡಿಕೆ ಮಾಡಿ ಲಾಭ ಗಳಿಸುವಂತೆ ಅಪರಿಚಿತರು ವಾಟ್ಸಾಪ್ ಮೂಲಕ ಕಳಿಸಿದ ಸಂದೇಶವನ್ನು ನಂಬಿದ ಬಿ.ಮೂಡ ಗ್ರಾಮದ ಜೋಡುಮಾರ್ಗ ನಿವಾಸಿ ಸುಬ್ರಾಯ ರಾಮ ಮಡಿವಾಳ (74) ಎಂಬವರು 18.92 ಲಕ್ಷ ರೂ ಹಣವನ್ನು ಕಳೆದುಕೊಂಡಿದ್ದಾರೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ವಾಟ್ಸಾಪ್ ನಲ್ಲಿ ಸಂದೇಶವೊಂದು ಬಂದು ಷೇರ್ ಟ್ರೇಡಿಂಗ್ ಗೆ ಹಣ ಹೂಡುವಂತೆ ಕೋರಿದ್ದರು. ಈ ಅಪರಿಚಿತ ಆರೋಪಿಗಳು ನೀಡಿದ ಸೂಚನೆಗಳನ್ನು ನಂಬಿ ಅವುಗಳನ್ನು ಅನುಸರಿಸಿ, ಕಳೆದ ನವೆಂಬರ್ ತಿಂಗಳಿಂದ ಈ ಜನವರಿ 9ನೇ ತಾರೀಕಿನವರೆಗೆ ಹಂತ ಹಂತವಾಗಿ ಆರೋಪಿಗಳು ತಿಳಿಸಿದ ನಾನಾ ಬ್ಯಾಂಕ್ ಖಾತೆಗಳಿಗೆ ಅವರು 18,92,200 ರೂಗಳನ್ನು ಪಾವತಿಸಿದ್ದಾರೆ. ಇಷ್ಟಾದರೂ ಆರೋಪಿಗಳು ಯಾವುದೇ ಲಾಭಾಂಶ  ನೀಡದೆ, ಪಾವತಿಸಿದ ಹಣವನ್ನೂ ನೀಡದೆ ವಂಚಿಸಿದ್ದಾರೆ ಎಂದು ನಗರ ಠಾಣೆಗೆ ದೂರು ನೀಡಿರುವ ಸುಬ್ರಾಯ ರಾಮ ಮಡಿವಾಳ ಅವರು, ಈ ಕುರಿತು ತನಿಖೆ ನಡೆಸಿ, ನ್ಯಾಯ ದೊರಕಿಸಿಕೊಂಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.