ಬಂಟ್ವಾಳ

ಜೋಡುಮಾರ್ಗ ನೇತ್ರಾವತಿ ಜೇಸಿ ಪದಗ್ರಹಣ: ಎಂ. ಸುಬ್ರಹ್ಮಣ್ಯ ಪೈ ಮತ್ತು ತಂಡ ಅಧಿಕಾರ ಸ್ವೀಕಾರ

ಬಂಟ್ವಾಳ: ಎಂ.ಸುಬ್ರಹ್ಮಣ್ಯ ಪೈ ನೇತೃತ್ವದ ಜೇಸಿ ಜೋಡುಮಾರ್ಗ ನೇತ್ರಾವತಿಯ ನೂತನ ತಂಡದ ಪದಗ್ರಹಣ ಕಾರ್ಯಕ್ರಮ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು

ಜೇಸಿ ವಲಯ 15ರ ಪೂರ್ವಾಧ್ಯಕ್ಷ ಸಂತೋಷ್. ಜಿ. ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಜೋಡುಮಾರ್ಗ ನೇತ್ರಾವತಿ ಜೇಸಿ ಬಿ.ಸಿ.ರೋಡ್ ಪರಿಸರದಲ್ಲಿ ಸಕಾರಾತ್ಮಕ ಕಾರ್ಯಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ, ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆಸುತ್ತಿದೆ, ಕಳೆದ ವರ್ಷ ಮಿಡ್ ಕಾನ್ ನಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಡೀ ವಲಯದಲ್ಲಿ ಗುರುತಿಸಲ್ಪಟ್ಟಿದೆ ಎಂದರು.

ಅಪೂರ್ವ ಜ್ಯುವೆಲರ್ಸ್ ಮಾಲೀಕ ಸುನಿಲ್ ಬಿ. ಮುಖ್ಯ ಅತಿಥಿಯಾಗಿ ಮಾತನಾಡಿ, ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಪೈ ಅವರು ಹಲವು ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಮೌನವಾಗಿಯೇ ಪರೋಪಕಾರದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಸಾಮಾಜಿಕವಾಗಿ ಸ್ಪಂದಿಸುವವರಾಗಿದ್ದಾರೆ ಎಂದು ಶ್ಲಾಘಿಸಿದರು.

ಜಾಹೀರಾತು

ಮತ್ತೋರ್ವ ಮುಖ್ಯ ಅತಿಥಿ ವಲಯ ಉಪಾಧ್ಯಕ್ಷ ಸಿ.ಎ.ಸನತ್ ಕುಮಾರ್ ನಾಯ್ಕ್ ಶುಭ ಹಾರೈಸಿದರು. ಈ ಸಂದರ್ಭ ನಿರ್ಗಮನ ಅಧ್ಯಕ್ಷೆ ಗಾಯತ್ರಿ ಲೋಕೇಶ್ ಅವರು ತನ್ನ ಅವಧಿಯ ಸಾಧನೆಗಳ ವರದಿ ಮಂಡಿಸಿದರೆ, ಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಅವರು ಶುಭ ಹಾರೈಸಿದರು. ಐಪಿಪಿ ಗಾಯತ್ರಿ ಲೋಕೇಶ್, ಉಪಾಧ್ಯಕ್ಷರಾಗಿ ರಮ್ಯಾ ಬಿ.ಎಸ್, ರೇಖಾ ರಾವ್, ಪ್ರಕಾಶ್ ಆಳ್ವ, ಜೀವನ್ ಕುಲಾಲ್, ಪ್ರೀತಿ ಪ್ರಕಾಶ್ ಹೆಗ್ಡೆ, ಕಾರ್ಯದರ್ಶಿಯಾಗಿ ಡಾ. ಧೀರಜ್ ಹೆಬ್ರಿ, ಜತೆಕಾರ್ಯದರ್ಶಿಯಾಗಿ ದೀಪ್ತಿ ಶ್ರೀನಿಧಿ ಭಟ್, ಕೋಶಾಧಿಕಾರಿಯಾಗಿ ಡಾ. ವಿನಾಯಕ ಕೆ.ಎಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರವೀಂದ್ರ ಕುಕ್ಕಾಜೆ, ಮಹಿಳಾ ಜೇಸಿ ಸಂಯೋಜಕಿಯಾಗಿ ಸೌಮ್ಯಾ ಹರಿಪ್ರಸಾದ್, ಜೂನಿಯರ್ ಜೇಸಿ ಸಂಯೋಜಕಿಯಾಗಿ ಸ್ಪರ್ಶ ಜೈನ್,  ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಭವಿಷ್, ನಿರ್ದೇಶಕರಾಗಿ ಹರಿಪ್ರಸಾದ್ ಕುಲಾಲ್, ಹರ್ಷರಾಜ್, ಶ್ರೀನಿಧಿ ಭಟ್, ಹರಿಶ್ಚಂದ್ರ ಆಳ್ವ, ಮನ್ಮಥರಾಜ್ ಜೈನ್ ಅಧಿಕಾರ ಸ್ವೀಕರಿಸಿದರು. ಪೂರ್ವಾಧ್ಯಕ್ಷ ರಾಮಚಂದ್ರ ರಾವ್ ಅತಿಥಿಗಳನ್ನು ವೇದಿಕೆಗೆ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಧೀರಜ್ ಹೆಬ್ರಿ ವಂದಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ