ಕಲ್ಲಡ್ಕ

ಕೋಮುಗಲಭೆಮುಕ್ತ ಬಂಟ್ವಾಳ ಸ್ಥಾಪನೆ ಶಾಸಕ ರಾಜೇಶ್ ನಾಯ್ಕ್ ದೊಡ್ಡ ಸಾಧನೆ: ಡಾ. ಪ್ರಸಾದ್ ಭಂಡಾರಿ ಶ್ಲಾಘನೆ

ಜಾಹೀರಾತು

ಡಾ. ಪ್ರಸಾದ್ ಭಂಡಾರಿ ಮಾತನಾಡಿದರು.

ಬಂಟ್ವಾಳ: ಬಂಟ್ವಾಳ ಕ್ಷೇತ್ರವನ್ನು ಕೋಮುಗಲಭೆಮುಕ್ತಗೊಳಿಸಿರುವುದು ಶಾಸಕ ರಾಜೇಶ್ ನಾಯ್ಕ್ ಅವರ ದೊಡ್ಡ ಸಾಧನೆ ಎಂದು ಹಿರಿಯ ಆರೆಸ್ಸೆಸ್ ಮುಖಂಡ ಪುತ್ತೂರಿನ ಡಾ. ಪ್ರಸಾದ್ ಭಂಡಾರಿ ಹೇಳಿದ್ದಾರೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಿಜೆಪಿ ಬಂಟ್ವಾಳ ಮೂಲಕ ಕೈಗೊಂಡಿರುವ ಗ್ರಾಮದೆಡೆಗೆ ಶಾಸಕರ ನಡಿಗೆ ಗ್ರಾಮವಿಕಾಸ ಯಾತ್ರೆಯ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಪೆರಾಜೆ ಗ್ರಾಮದ ಸಾದಿಕುಕ್ಕು ಗುಡ್ಡೆಚಾಮುಂಡಿ ಕ್ಷೇತ್ರದ ವಠಾರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜಾಹೀರಾತು

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ರಾಜಧರ್ಮ ಪಾಲಿಸುವ ಮೂಲಕ ರಾಜೇಶ್ ನಾಯ್ಕ್ ಅವರು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ ಎಂದು ಶ್ಲಾಘಿಸಿದರು.

 

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ,  ಶಾಸಕತ್ವದ ಅವಧಿಯಲ್ಲಿ ಜನತೆಯ ವಿಶ್ವಾಸದಿಂದ ಕೆಲಸ ಕಾರ್ಯ ನಡೆಸುವ ಅವಕಾಶ ದೊರಕಿದೆ ಎಂದರು.ಅಧ್ಯಕ್ಷತೆಯನ್ನು ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್ ವಹಿಸಿದ್ದರು. ಈ ಸಂದರ್ಭ ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ವಿಟ್ಲಪಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ, ನಗರ ನೀರು ಸರಬರಾಜು- ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಗ್ರಾಮವಿಕಾಸ ಯಾತ್ರೆ ಸಂಚಾಲಕ ದೇವದಾಸ ಶೆಟ್ಟಿ,  ಸಹಸಂಚಾಲಕ ಮಾಧವ ಮಾವೆ, ನೆಟ್ಲಮುಡ್ನೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ, ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ‌ ಉಮೇಶ್ ಎಸ್.ವಿ. ಸ್ವಾಗತಿಸಿದರು. ಪೆರಾಜೆ ಗ್ರಾ.ಪಂ.ಸದಸ್ಯ ರಾಜಾರಾಮ್ ಭಟ್ ವಂದಿಸಿದರು. ಯತಿರಾಜ್ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು

ಜ.16. ರಂದು ರಾತ್ರಿ ಬಿಜೆಪಿ ಕಾರ್ಯಕರ್ತ ಕೆಲಿಂಜ ಕೃಷ್ಣಪ್ಪ ಗೌಡ ಪಾಲ್ತಿಮಾರ್ ರ ಮನೆಯಲ್ಲಿ ವಾಸ್ತವ್ಯ ಮಾಡಿದ್ದ,ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಕಾರ್ಯಕರ್ತರು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ” ವಂದೆ ಮಾತರಂ ” ಗೀತೆ ಹಾಡಿದ ಬಳಿಕ ಪಾದಯಾತ್ರೆ ಹೊರಡಿತು.ಪಾದಯಾತ್ರೆ ಹೊರಡುವ ಮುನ್ನ ಶಾಸಕ ರಾಜೇಶ್ ನಾಯ್ಕ್ ಅವರು ಭೂಮಿ ತಾಯಿಗೆ ನಮಸ್ಕರಿಸಿ ಬಳಿಕ ಹೆಜ್ಜೆ ಹಾಕಿದರು.ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪ್ರಮುಖರಾದ, ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ದೇವದಾಸ್ ಶೆಟ್ಟಿ, ಮಾದವ ಮಾವೆ, ಸುದರ್ಶನ್ ಬಜ ಚೆನ್ನಪ್ಪ ಕೋಟ್ಯಾನ್, ಸುಲೋಚನ ಜಿ.ಕೆ‌.ಭಟ್, ದಿನೇಶ್ ಅಮ್ಟೂರು, ರಂಜಿತ್ ಮೈರ, ಸೀಮಾಮಾದವ, ಡೊಂಬಯ್ಯ ಅರಳ, ಸಂದೇಶ್ ಶೆಟ್ಟಿ, ದಿನೇಶ್ ಪೂಜಾರಿ, ಅರವಿಂದ ರೈ, ಗಣೇಶ್ ಪೂಜಾರಿ, ಸನತ್ ಕುಮಾರ್ ರೈ, ಸುಪ್ರೀತ್ ಅಳ್ವ,ಪುಷ್ಪರಾಜ ಚೌಟ, ರಮನಾಥ ರಾಯಿ, ಸುರೇಶ್ ಕೋಟ್ಯಾನ್, ದಿನೇಶ್ ಶೆಟ್ಟಿ ದಂಬೆದಾರ್, ಶಾಂತಪ್ಪ ಪೂಜಾರಿ, ಹರೀಶ್ ಮಾಣಿ, ಚರಣ್ ಜುಮಾದಿಗುಡ್ಡೆ, ಜಯಂತಿ , ನಾರಾಯಣ ಶೆಟ್ಟಿ ದೋಟ, ದೇವಿಪ್ರಸಾದ್ ಶೆಟ್ಟಿ, ಜಯಪ್ರಸಾದ್, ಸಂದೀಪ್ , ಸಂತೋಷ್ ರಾಯಿಬೆಟ್ಟು, ಉಮಾವತಿ, ಲೋಹಿತ್ ಅಗರಿ,ಮೀನಾಕ್ಷಿ, ಪುರುಷೋತ್ತಮ ಶೆಟ್ಟಿ, ರೋನಾಲ್ಡ್ ಡಿ.ಸೋಜ, ಯಶೋಧರ ಕರ್ಬೆಟ್ಟು, ಗಣೇಶ್ ಶೆಟ್ಟಿ ಕಲ್ಲಡ್ಕ, ವಜ್ರನಾಥ್ ಕಲ್ಲಡ್ಕ, ಧನಂಜಯ ಶೆಟ್ಟಿ, ವಿಶ್ವನಾಥ ವೀರಕಂಭ, ಉಮೇಶ್ ಅರಳ, ಸೀತಾರಾಮ ಪೂಜಾರಿ, ಚಂದ್ರಶೇಖರ ಬಾಯಿಲ, ಪ್ರಶಾಂತ್ ಅಗರಿ, ಮತ್ತಿತರರು ಉಪಸ್ಥಿತರಿದ್ದರು. ಜ.16 ರಂದು ರಾತ್ರಿ ಕೆಲಿಂಜದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಗೌಡ ಪಾಲ್ತಿಮಾರ್ ರ ಮನೆಗೆ ವಾಸ್ತವ್ಯಕ್ಕೆ ಆಗಮಿಸಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರನ್ನು ವೀರಕಂಭದ ನೂರಾರು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು.

ಜಾಹೀರಾತು

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ