ಬಂಟ್ವಾಳ

ರಾಯಿ: ಸಿಡಿಲಿಗೆ ಗ್ರಾ.ಪಂ.ಮಾಜಿ ಅಧ್ಯಕ್ಷರ ಮನೆ ಹಾನಿ, ಅಪಾಯದಿಂದ ಕುಟುಂಬ ಪಾರು

ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಮನೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೀಡಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ಶುಕ್ರವಾರ ರಾತ್ರಿ ದಿಢೀರನೆ ಸುರಿದ ಮಳೆಗೆ ಮೊದಲು ಭಾರೀ ಶಬ್ಧ ಸಹಿತ ಇವರ  ಮನೆ ಹಿಂಬದಿ ಮರವೊಂದಕ್ಕೆ ಸಿಡಿಲು ಬಡಿದಿದೆ. ಇದೇ ವೇಳೆ ಇವರ ಮನೆ ಮತ್ತು ಸ್ನಾನಗೃಹದ ಗೋಡೆ ಕೊರೆದು ಮನೆಯೊಳಗೆ ವಿದ್ಯುತ್ ಪರಿಕರವೆಲ್ಲಾ ಸುಟ್ಟು ಕರಕಲಾಗಿದೆ. ಸ್ವತಃ ಕಣ್ಣೆದುರೇ ಫ್ಯಾನ್ ಮತ್ತಿತರ ವಿದ್ಯುತ್ ಸಾಮಾಗ್ರಿ ಸುಟ್ಟು ಪುಡಿಯಾಗಿರುವ ದೃಶ್ಯ ಕಂಡು ಮನೆಯವರು ಆಘಾತಗೊಂಡಿದ್ದಾರೆ. ಮನೆ ಗೋಡೆ ಮತ್ತು ಹೆಂಚಿನ ಮಾಡು ಸಂಪೂರ್ಣ ಬಿರುಕು ಕಾಣಿಸಿಕೊಂಡು ಕುಸಿತದ ಭೀತಿ ಉಂಟು ಮಾಡಿದೆ. ಗ್ರಾಮ ಕರಣಿಕ ಪರೀಕ್ಷಿತ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದರು.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ