ಬಂಟ್ವಾಳ: ಲಯನ್ಸ್ ಕ್ಲಬ್ ಕೊಳ್ನಾಡು-ಸಾಲೆತ್ತೂರು ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮೋತ್ಸವ- 2022 ಕಾರ್ಯಕ್ರಮ ಲಯನ್ಸ್ ಸೇವಾ ಮಂದಿರ, ಮಂಚಿಯಲ್ಲಿ ನಡೆಯಿತು.
ಕೊರಗಪ್ಪ ಮೂಲ್ಯ ದೀಪಪ್ರಜ್ವಲನಗೈದರು. ಕ್ಲಬ್ ನ ಅಧ್ಯಕ್ಷ ಜಯಪ್ರಕಾಶ್ ರೈ ಮೇರಾವು ಬಾವುಟ ಊರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯೋತ್ಸವದ ಬಗ್ಗೆ ಉಮನಾಥ್ ರೈ ಮೇರಾವು ಮಾತನಾಡಿದರು. ವಲಯಾಧ್ಯಕ್ಷ ರಮಾನಂದ ನೂಜಿಪ್ಪಾಡಿ, ಜಿಲ್ಲಾ ದೀಪಾವಳಿ ಕಾರ್ಯಕ್ರಮದ ಸಹಸಂಯೋಜಕ ಚಿತ್ತರಂಜನ್, ಕ್ಲಬ್ ಕಾರ್ಯಕ್ರಮ ಸಂಯೋಜಕ ರವೀಂದ್ರ ಕುಕ್ಕಾಜೆ, ಅಧ್ಯಕ್ಷ ಜಯಪ್ರಕಾಶ್ ರೈ ಮೇರಾವು, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಪದ್ಮ ಐತಾಳ್ ಉಪಸ್ಥಿತರಿದ್ದರು. ಮುಖ್ಯ ಅತಿಥಿ ಕೊರಗಪ್ಪ ಮೂಲ್ಯ ದೈವ ಪರಿಚಾರಕರನ್ನು ಗೌರವಿಸಲಾಯಿತು. ಕನ್ನಡಲ್ಲಿಯೇ ಮಾತನಾಡುವ ಆಶುಭಾಷಣ ಸ್ಪರ್ಧೆ, ಸಾಂಪ್ರದಾಯಿಕ ಉಡುಗೆ-ನಡಿಗೆ ಸ್ಪರ್ಧೆ, ಬಹುಮಾನ ವಿತರಣೆ ಗೀತ-ವೃಂದ-ಗಾಯನ ನಡೆದವು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…