ಬಂಟ್ವಾಳ: ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ವತಿಯಿಂದ (ಎಸ್ಡಿಟಿಯು) ಗೂಡ್ಸ್ ಟೆಂಪೋ ಮತ್ತು ಪಿಕ್ ಅಪ್ ವಾಹನ ಚಾಲಕರ ಯೂನಿಯನ್ ಬಂಟ್ವಾಳ ಘಟಕ ಅಸ್ಥಿತ್ವಕ್ಕೆ ಬಂದಿದೆ
ಘಟಕದ ಅಧ್ಯಕ್ಷರಾಗಿ ಮೊಹಮ್ಮದ್ ಅಶ್ರಫ್ ಅಲಿ, ಉಪಾಧ್ಯಕ್ಷರಾಗಿ ಬಿ. ಸಿ ಲೇತಿಫ್, ಕಾರ್ಯದರ್ಶಿಯಾಗಿ ಹುಸೈನಬ್ಬ, ಜೊತೆ ಕಾರ್ಯದರ್ಶಿ ಅಝೀಝ್ ರಾಮಲ್ ಕಟ್ಟೆ, ಕೋಶಾಧಿಕಾರಿಯಾಗಿ ಮೊಹಮ್ಮದ್ ಇಕ್ಬಾಲ್ ಸದಸ್ಯರಾಗಿ ಸತ್ತಾರ್ ತಲಪಾಡಿ, ಮೊಹಮ್ಮದ್ ನಂದರಬೆಟ್ಟು ರವರನ್ನು ಆಯ್ಕೆ ಮಾಡಲಾಯಿತು
ಚಾಲಕರನ್ನು ಯೂನಿಯನ್ ಗೆ ಸೇರ್ಪಡೆಗೊಳಿಸಿ ಮಾತನಾಡಿದ ಎಸ್ಡಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೊಲಕೆ ಅಸಂಘಟಿತ ಕಾರ್ಮಿಕರು ಸಂಘಟಿತವಾಗಿ ತಮ್ಮ ಹಕ್ಕು ಮತ್ತು ಅವಕಾಶಗಳಿಗಾಗಿ ಒಗ್ಗಟ್ಟಾಗಬೇಕಾಗಿದೆ. ಚಾಲಕರು ತಮ್ಮ ವೃತ್ತಿಯೊಂದಿಗೆ ಸಮಾಜ ಸೇವೆಯ ಕಳಕಳಿಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು
ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಈ ಸಂದರ್ಭದಲ್ಲಿ ಮಾತನಾಡಿದರು ಎಸ್ಡಿಟಿಯು ಬಂಟ್ವಾಳ ತಾಲೂಕು ಅಧ್ಯಕ್ಷ ಕಾದರ್ ಅಲಾಡಿ, ಆಟೋ ಯೂನಿಯನ್ ಬಂಟ್ವಾಳ ತಾಲೂಕು ಅಧ್ಯಕ್ಷ ಸಂಶುದ್ದೀನ್ ಪಲ್ಲಮಜಲ್, ಮಂಗಳೂರು ನಗರ ಕಾರ್ಯದರ್ಶಿ ಮುಸ್ತಫಾ ಪರ್ಲಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…