ಬಂಟ್ವಾಳ: ಕಾರೊಂದು ಪ್ರಪಾತಕ್ಕೆ ಉರುಳಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದು ಬುಡೋಳಿ ಸಮೀಪ ಇರುವ ಅಪಾಯಕಾರಿ ಹೊಂಡಕ್ಕೆ ಉರುಳಿ ಬಿದ್ದಿದೆ. ಬುಡೋಳಿ ಯೂತ್ ಫೇಡರೇಶನ್ ಸದಸ್ಯರು ಮತ್ತು ಸೈಲೆಂಟ್ ಫ್ರೆಂಡ್ಸ್ ಬುಡೋಳಿ ಸದಸ್ಯರು ಕಾರ್ಯಾಚರಣೆ ನಡೆಸಿ ಕಾರಿನೊಳಗಡೆ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರನ್ನು ಹೊರ ತೆಗೆದಿದ್ದಾರೆ. ಈ ಅಪಾಯಕಾರಿ ಜಾಗದ ಬಗ್ಗೆ ಹಲವಾರು ಬಾರಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಕಳೆದ ಕೆಲವು ದಿನಗಳಿಂದ ಇಲ್ಲಿ ಹೆದ್ದಾರಿ ಕಾಮಗಾರಿಯೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವೇಗನಿಯಂತ್ರಣವನ್ನು ಕಾಪಾಡದೇ ಇದ್ದರೆ ಅಪಘಾತ ಇಲ್ಲಿ ಸಂಭವಿಸುವ ಅಪಾಯವಿರುವುದನ್ನು ಮಾಧ್ಯಮಗಳು ಎಚ್ಚರಿಸಿದ್ದವು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…