ಬಂಟ್ವಾಳ: ಬಂಟ್ವಾಳ ಪುಂಜಾಲಕಟ್ಟೆ ರಸ್ತೆ ಅಗಲಗೊಳಿಸುವ ಸಂದರ್ಭ ರಸ್ತೆ ಬದಿ ಇರುವ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಿಮಿತ್ತ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಬಂಟ್ವಾಳ ಫೀಡರ್ ನಿಂದ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಜಕ್ರಿಬೆಟ್ಟು, ಮಣಿಹಳ್ಳ, ಪಣೆಕಲಪಡ್ಪು, ಮಣಿ ಪ್ರದೇಶ ಮತ್ತು ಸಿದ್ಗಕಟ್ಟೆ ಫೀಡರಿನಿಂದ ವಿದ್ಯುತ್ ಸರಬರಾಜಾಗುವ ನಾವೂರು, ಮೂಡನಡುಗೋಡು ಗ್ರಾಮ ಮತ್ತು ಸರಪಾಡಿ, ಪಂಜಿಕಲ್ಲು ಗ್ರಾಮಗಳ ಕೆಲ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…