ಬಂಟ್ವಾಳ

ಗ್ರಾಪಂ ಚುನಾವಣೆ: ಬಂಟ್ವಾಳದಲ್ಲಿ 2480 ನಾಮಪತ್ರ ಸ್ವೀಕೃತ

ಬಂಟ್ವಾಳ: ಗ್ರಾಮ ಪಂಚಾಯಿತಿ ಚುನಾವಣೆ ಡಿ.22ರಂದು ಬಂಟ್ವಾಳ ತಾಲೂಕಿನಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನ 57 ಗ್ರಾಪಂಗಳ 837 ಸ್ಥಾನಗಳಿಗೆ 2552 ನಾಮಪತ್ರಗಳು ಶುಕ್ರವಾರದೊಳಗೆ ಸಲ್ಲಿಕೆಯಾಗಿದ್ದವು. ಶನಿವಾರ ಪರಿಶೀಲನಾ ಕಾರ್ಯ ನಡೆದಿದ್ದು, 2480 ನಾಮಪತ್ರಗಳು ಸ್ವೀಕೃತಗೊಂಡಿವೆ.  72 ನಾಮಪತ್ರಗಳು ಮಾರ್ಗಸೂಚಿಯನ್ನು ಪಾಲಿಸದೇ ಸಲ್ಲಿಸಿದ ಕಾರಣ ತಿರಸ್ಕೃತಗೊಂಡಿವೆ. ಸೋಮವಾರ ನಾಮಪತ್ರ ಹಿಂತೆಗೆದುಕೊಳ್ಳಲು ಕಡೇ ದಿನವಾಗಿದೆ. 26 ಸ್ಥಾನಗಳ ನರಿಕೊಂಬುವಿನಲ್ಲಿ 91 ನಾಮಪತ್ರಗಳು ಸ್ವೀಕೃತಗೊಂಡರೆ, 24 ಸ್ಥಾನಗಳ ಗೋಳ್ತಮಜಲಿನಲ್ಲಿ 82 ನಾಮಪತ್ರಗಳು ಸ್ವೀಕೃತಗೊಂಡಿವೆ. ಸಜೀಪಮುನ್ನೂರು 23 ಸ್ಥಾನ, 70 ನಾಮಪತ್ರ, ಸಜಿಪಮೂಡ 20 ಸ್ಥಾನ 66 ನಾಮಪತ್ರ, ಸಜಿಪನಡು 15 ಸ್ಥಾನಕ್ಕೆ 57 ನಾಮಪತ್ರಗಳು ಸಲ್ಲಿಕೆಯಾದದ್ದು ಸ್ವೀಕೃತಗೊಂಡಿವೆ. ಚೆನ್ನೈತೋಡಿ 20 ಸ್ಥಾನಗಳಿಗೆ 52, ಪಿಲಾತಬೆಟ್ಟಿನ 9 ಸ್ಥಾನಗಳಿಗೆ 23 ನಾಮಪತ್ರಗಳು ಸ್ವೀಕೃತಗೊಂಡರೆ, 29 ಸ್ಥಾನಗಳ ಬಾಳೆಪುಣಿಗೆ 84, 21 ಸ್ಥಾನಗಳ ಮಂಚಿಗೆ 65, 19 ಸ್ಥಾನಗಳ ಇಡ್ಕಿದು ಗ್ರಾಪಂಗೆ 52 ನಾಮಪತ್ರಗಳು ಸ್ವೀಕೃತವಾಗಿವೆ. 31 ಸ್ಥಾನಗಳಿರುವ ಕೊಳ್ನಾಡು ಗ್ರಾಪಂಗೆ 103 ನಾಮಪತ್ರಗಳು ಸ್ವೀಕೃತವಾಗಿವೆ. 16 ಸ್ಥಾನಗಳ ಕರೋಪಾಡಿಗೆ 61, 20 ಸ್ಥಾನಗಳ ಕನ್ಯಾನಕ್ಕೆ 95, 20 ಸ್ಥಾನಗಳ ಪುಣಚಕ್ಕೆ 69 ನಾಮಪತ್ರಗಳು ಸ್ವೀಕೃತಗೊಂಡಿವೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.