ಕಲ್ಲಡ್ಕ

ಯುವವಾಹಿನಿ ಮಾಣಿ ಘಟಕ ಅಧ್ಯಕ್ಷರಾಗಿ ಪ್ರಶಾಂತ್ ಅನಂತಾಡಿ

ಜಾಹೀರಾತು

ಬಂಟ್ವಾಳ: ಯುವವಾಹಿನಿ ಮಾಣಿ ಘಟಕದ 2020-21 ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ ಅನಂತಾಡಿ, ಕಾರ್ಯದರ್ಶಿಯಾಗಿ ರಾಜೇಶ್ ಎಸ್.ಬಲ್ಯ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷ ರಮೇಶ್ ಮುಜಲ ವಹಿಸಿದ್ದರು. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್, ಮಂಗಳೂರು ನಾರಾಯಣಗುರು ಅಧ್ಯಯನ ಪೀಠದ ಸದಸ್ಯೆ ನಮಿತಾ ಶ್ಯಾಮ್ ಉಪಸ್ಥಿತರಿದ್ದರು. ನಾರಾಯಣಗುರು ಸೇವಾ ಸಂಘ ಮಾಣಿಯ ಅಧ್ಯಕ್ಷರಾದ ಸುರೇಶ್ ಸೂರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.  ಸಾಧಕರಾದ ಈಶ್ವರ ಪೂಜಾರಿ ಕಡೇಶಿವಾಲಯ, ನಾರಾಯಣ ಸಾಲ್ಯಾನ್ ಮಂಜಲಹಿತ್ಲು,ಡಾ. ಶ್ರುತಿಕಾಂತ್, ನಿಶಾ, ಪ್ರಶಾಂತ್ ಅನಂತಾಡಿ ಅವರನ್ನು ಸನ್ಮಾನಿಸಲಾಯಿತು. ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಸಮಾಜದ 5 ಜನ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.  ಬಿಲ್ಲವ ಬಡ ಕುಟುಂಬದ 3 ಜನ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಹಸ್ತಾಂತರಿಸಲಾಯಿತು. ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಬಿಲ್ಲವ ಬಡ ಕುಟುಂಬದ ಇಬ್ಬರು ವಧುಗಳಿಗೆ ಮಂಗಳನಿಧಿಯನ್ನು ಹಸ್ತಾಂತರಿಸಲಾಯಿತು. ಯುವವಾಹಿನಿ ಮಾಣಿ ಘಟಕದ ಒಂದು ವರ್ಷದ ಕಾರ್ಯಕ್ರಮಗಳನ್ನು ಒಳಗೊಂಡ ವಾರ್ಷಿಕ ಸಂಚಿಕೆ ಮಾಣಿಕ್ಯವನ್ನು ಪ್ರಧಾನ ಸಂಪಾದಕ ರೇಣುಕಾ ಕಣಿಯೂರು ಉಪಸ್ಥಿತಿಯಲ್ಲಿ ಪದ್ಮರಾಜ್ ಆರ್ ಬಿಡುಗಡೆ ಗೊಳಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಬಾಕಿಲ ಪರಿಚಯ ಮಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ನೆರವೇರಿಸಿಕೊಟ್ಟರು. ನೂತನ ಅಧ್ಯಕ್ಷರಾಗಿರುವ ಪ್ರಶಾಂತ್ ಅನಂತಾಡಿ ಇವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಘಟನಾ ಕಾರ್ಯದರ್ಶಿ ರಾಜೇಶ್ ಬಾಬನಕಟ್ಟೆ ಶುಭಹಾರೈಸಿದರು. ಕಾರ್ಯದರ್ಶಿ ಶಿವರಾಜ್ ಪಿ.ಆರ್ ಸ್ವಾಗತಿಸಿದರು, ನಿಯೋಜಿತ ಕಾರ್ಯದರ್ಶಿ ರಾಜೇಶ್ ಎಸ್ ಬಲ್ಯ ವಂದಿಸಿದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts