ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್, ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣೆ ಮತ್ತು ಕೋವಿಡ್ ತಪಾಸಣಾ ಶಿಬಿರ ನಡೆಯಿತು.
ಕನ್ಯಾನ ಭಾರತ ಸೇವಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಪದ್ಮನಾಭ ರೈ, ರೊಟೆರಿಯನ್ನುಗಳಾದ ಸುಜಾತ ಪಿ ರೈ, ಸುಂದರ ಬಂಗೇರ, ರಮೇಶ್ ನೆಟ್ಲ, ಗಣೇಶ್ ಶೆಟ್ಟಿ, ಜ್ಯೋತಿಂದ್ರ ಶೆಟ್ಟಿ, ಭಾಗಿಯಾಗಿದ್ದರು, ಕನ್ಯಾನ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನ್ನೆಟ್, ಡಾ. ಅಶ್ವಿನ್ ಸಾಗರ್ ಸಾರ್ವಜನಿಕರ ತಪಾಸಣೆ ನಡೆಸಿದರು.