ಬಂಟ್ವಾಳ

ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಕೌಶಿಕ್ ಗೆ ಅಭಿನಂದನೆ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ

ಜಾಹೀರಾತು

ಕಾಲ ಬೆರಳಲ್ಲೇ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿದ ಕಂಚಿಗಾರಪೇಟೆ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಪುತ್ರ ಕೌಶಿಕ್ ಅವರನ್ನು ರೋಟರಿ ಟೌನ್ ವತಿಯಿಂದ ಅವರ ಮನೆಗೆ ತೆರಳಿ ಅಧ್ಯಕ್ಷ ಪದ್ಮನಾಭ ರೈ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಧನಸಹಾಯವನ್ನೂ ಈ ವೇಳೆ ನೀಡಲಾಯಿತು. ಈ ವೇಳೆ ನಿಯೋಜಿತ ರೋಟರಿ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ ಕೌಶಿಕ್ ನನ್ನು ಅಭಿನಂದಿಸಿದರು. ಅಧ್ಯಕ್ಷ ಪದ್ಮನಾಭ  ರೈ ಮಾತನಾಡಿ ಮುಂದಿನ ದಿನಗಳಲ್ಲಿಯೂ ಕೌಶಿಕ್ ಶಿಕ್ಷಣಕ್ಕೆ ಕ್ಲಬ್ಬಿನ ವತಿಯಿಂದ ನೆರವನ್ನು ನೀಡುವುದಾಗಿ ಪ್ರಕಟಿಸಿದರು. ಈ ವೇಳೆ ರೋಟರಿ ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್. ಬಂಗೇರ, ಮಾತೃಕ್ಲಬ್ಬಿನ ಅಧ್ಯಕ್ಷ ನಾರಾಯಣ  ಹೆಗ್ಡೆ, ಸುಜಾತಾ ಪಿ. ರೈ,ಜ್ಯೋತಿಂದ್ರ ಶೆಟ್ಟಿ, ಸೇಸಪ್ಪ ಮೂಲ್ಯ, ಚಿತ್ತರಂಜನ್  ಶೆಟ್ಟಿ, ಮೊಹಮ್ಮದ್  ಹನೀಫ್, ಕೇಶವ ನಾಯ್ಕ್, ಮಚೇಂದ್ರ ಸಾಲಿಯಾನ್, ಆಶಾಮಣಿ ರೈ, ಗಾಯತ್ರಿ  ಲೋಕೇಶ್, ಸುಂದರ್  ಬಂಗೇರ, ಸುಂದರ್  ರೈ, ಸತೀಶ್, ದಯಾನಂದ  ಶೆಟ್ಟಿ,  ಆಲ್ಬರ್ಟ್ ಮೆನೆಜಸ್, ಸುಧೀರ್, ಸುರೇಶ ಸಾಲಿಯಾನ್, ನಾಗೇಶ್, ಸುಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು. ಟೌನ್ ಕಾರ್ಯದರ್ಶಿ ಕಿಶೋರ್ ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ