ಬಂಟ್ವಾಳ

ಭಾರಿ ಮಳೆಗೆ ಅಂಗನವಾಡಿ ಕೇಂದ್ರಕ್ಕೆ ಹಾನಿ

ಜಾಹೀರಾತು

ಕಳೆದೆರಡು ದಿನಗಳಿಂದ ಗಾಳಿ ಮತ್ತು ಸುರಿಯುತ್ತಿರುವ ಧಾರಾಕಾರ ಮಳೆಗೆ  ಕುಕ್ಕಿಪಾಡಿ ಗ್ರಾಮದ ಸಿದ್ಧಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರದ ಆವರಣ ಗೋಡೆ ಕುಸಿದು ಬಿದ್ದಿದ್ದು, ಮಳೆ ನೀರು ಅಂಗನವಾಡಿ  ಕಟ್ಟಡದ ಒಳಗೆ ನುಗ್ಗಿ ಕಟ್ಟಡದಕ್ಕೂ  ಹಾನಿಯಾಗಿದೆಲ್ಲದೆ ಹಂಚಿನ ಛಾವಣಿಯು ಕುಸಿಯುವ ಹಂತದಲ್ಲಿದೆ.  ಶನಿವಾರ ಮುಂಜಾನೆ ಅಂಗನವಾಡಿ ಕೇಂದ್ರದ ಅವರಣಗೋಡೆ ಕುಸಿದುಬಿದ್ದಿದ್ದು,ಕೇಂದ್ರ ಸಂಪೂರ್ಣಜಲಾವೃತಗೊಂಡು ಕಟ್ಟಡಕ್ಕು ಹಾನಿಯಾಗಿದೆಯಲ್ಲದೆ ಬೀಸಿದ ಗಾಳಿಗೆ ಕೇಂದ್ರದ ಹಂಚಿನ ಛಾವಣಿ ಹಾರಿ,ವಿದ್ಯುತ್ ಕಂಬ ಕೂಡ ಕಟ್ಟಡದ ಮೇಲೆ ವಾಲಿ ನಿಂತಿದ್ದು ಅಪಾಯದಸ್ಥಿತಿಯಲ್ಲಿದೆ.  ಈ ಬಗ್ಗೆ ಸುದ್ದಿ ತಿಳಿದ ಸ್ಥಳೀಯ ತಾಪಂ ಸದಸ್ಯ ಪ್ತಭಾಕರ ಪ್ರಭು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಹೊಸಕಟ್ಟಡ ನಿರ್ಮಾಣ : ಪುಟಾಣಿ ಮಕ್ಕಳ ಹಿತದೃಷ್ಟಿಯಿಂದ ಈ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಬೇಕಾಗಿದ್ದು, ಈಗಾಗಲೇ  ಈ ಅಂಗನವಾಡಿ ದುರಸ್ಥಿಗಾಗಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ  ಕಾದಿರಿಸಲಾದ 50 ಸಾ.ರೂ.ಅನುದಾನ,ತಾಪಂ ನಿಧಿಯಿಂದ ಸದಸ್ಯರಿಗೆ ಸಿಗುವ 2 ಲಕ್ಷ ರೂ.ವನ್ನು ಈ ಕೇಂದ್ರದ ಕಟ್ಟಡಕ್ಕೆ ವಿನಿಯೋಗಿಸಲಾಗುವುದು,ಈ ಬಗ್ಗೆ ತಾಪಂ ಇಒ ರಾಜಣ್ಣ ಅವರಿಗೆ ಪತ್ರ ನೀಡಲಾಗುವುದು ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ತಿಳಿಸಿದ್ದಾರೆ. ಕಟ್ಟಡದ ಉಳಿಕೆ ಅನುದಾನಕ್ಕೆ ಈಗಾಗಲೇ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರೊಂದಿಗೆ ಚರ್ಚಿಸಿದ್ದು,ಉಳಿದ 5ಲಕ್ಷ ರೂ. ಅನುದಾನವನ್ನು ತಮ್ಮ ಶಾಸಕರ ನಿಧಿಯಿಂದ ಒದಗಿಸಿ ಕೊಡುವ ಭರವಸೆಯನ್ನು ಶಾಸಕ ರಾಜೇಶ್ ನಾಯ್ಕ್ ಅವರು  ನೀಡಿದ್ದಾರೆ ಎಂದು ಪ್ರಭು ತಿಳಿಸಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.