ಬಂಟ್ವಾಳ

ಬಂಟ್ವಾಳ ಎಸ್.ವಿ.ಎಸ್.ಕಾಲೇಜಿಗೆ ಮೆಂಟರ್ ಕಾಲೇಜು ಮಾನ್ಯತೆ

  • ರಾಜ್ಯದ 17 ಕಾಲೇಜುಗಳಲ್ಲಿ ದ.ಕ. ಜಿಲ್ಲೆಯ ನಾಲ್ಕು ಕಾಲೇಜಿಗೆ ಗೌರವ

www.bantwalnews.com Editor: Harish Mambady

ನ್ಯಾಕ್ ಮೌಲ್ಯಮಾಪನದಲ್ಲಿ ಎ ಗ್ರೇಡ್ ಮಾನ್ಯತೆ ಪಡೆದ ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿಗೆ ಯುಜಿಸಿಯಿಂದ ಮೆಂಟರ್ ಕಾಲೇಜು ಎಂಬ ಮಾನ್ಯತೆ ದೊರಕಿದೆ. ಉನ್ನತ ಶೀಕ್ಷಣದ ಗುಣ ಮಟ್ಟವನ್ನು ಹೆಚ್ಚಿಸುವ ಭಾರತ ಸರಕಾರದ ಯುಜಿಸಿಯ ಪರಾಮರ್ಶ್ ಯೋಜನೆಯು ನ್ಯಾಕ್ ಮೌಲ್ಯಮಾಪನಕ್ಕೆ ಮುಂದಾಗುವ ಯಾವುದೇ ಕಾಲೇಜುಗಳಿಗೆ ಮಾರ್ಗದರ್ಶನ ನೀಡುವರೇ, ಎ ಗ್ರೇಡ್ ಪಡೆದ ಕಾಲೇಜುಗಳಿಗೆ ಅವಕಾಶ ನೀಡುತ್ತದೆ. ವಿಶೇಷವಾದ ಈ ಹೊಣೆಗಾರಿಕೆಯನ್ನು ಯುಜಿಸಿಯ ಈ ಯೋಜನೆಯು ಎಸ್.ವಿ.ಎಸ್. ಕಾಲೇಜಿಗೆ ಮೊದಲ ಹಂತದಲ್ಲೇ ನೀಡಿದೆ.

ಜಾಹೀರಾತು

ಸೆ. 6ರಂದು ಯುಜಿಸಿಯು ಘೋಷಣೆ ಮಾಡಿದ ಪಟ್ಟಿಯಲ್ಲಿ ರಾಜ್ಯದ 17 ಕಾಲೇಜುಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ 4 ಕಾಲೇಜುಗಳು ಆಯ್ಕೆಯಾಗಿವೆ. ಇವುಗಳಲ್ಲಿ ಬಂಟ್ವಾಳ ತಾಲೂಕಿನ ಎಸ್.ವಿಎಸ್. ಕಾಲೇಜು ಕೂಡ ಒಂದಾಗಿದೆ. ಈ ಹೊಣೆಗಾರಿಕೆ ಪಡೆದ ಕಾಲೇಜುಗಳು ನ್ಯಾಕ್ ಮೌಲ್ಯಮಾಪನಕ್ಕೆ ಮುಂದಾಗುವ ಕಾಲೇಜುಗಳಿಗೆ ಮಾರ್ಗದರ್ಶನ ನೀಡಬೇಕಾಗಿರುತ್ತದೆ. ಇತ್ತೀಚಿಗೆ, ಭಾರತ ಸರಕಾರದ ಬಯೋಟೆಕ್ನಾಲಜಿ ಇಲಾಖೆಯಿಂದ ಸ್ಟಾರ್ ಕಾಲೇಜು ಮಾನ್ಯತೆ ಪಡೆದ ಎಸ್.ವಿ.ಎಸ್. ಕಾಲೇಜಿಗೆ ಮೆಂಟರ್ ಕಾಲೇಜು ಮಾನ್ಯತೆ ದೊರಕಿದ್ದು ಕಾಲೇಜಿನ ಕೀರ್ತಿ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ (ರಿ.) ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ ಮತ್ತು ಕಾರ್ಯದರ್ಶಿ ಹಾಗೂ ಕಾಲೇಜಿನ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ವೈಸ್ ಪ್ರಿನ್ಸಿಪಾಲ್ ಮತ್ತು ಐಕ್ಯೂಎಸಿ ಸಂಯೋಜಕಿ ಡಾ| ಸುಜಾತ ಎಚ್.ಆರ್. ಮತ್ತು ಐಕ್ಯೂಎಸಿ ಸಹಾಯಕ ಸಂಯೋಜಕಿ ಅಖಿಲ ಪೈ ಎಚ್. ನೇತೃತ್ವ ವಹಿಸಿದ್ದರು ಎಂದು ಪ್ರಿನ್ಸಿಪಾಲ್ ಡಾ. ಪಾಂಡುರಂಗ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.