ಬಂಟ್ವಾಳ

ಮಳೆಯ ಅಬ್ಬರ, ನೇತ್ರಾವತಿ ಸಮೃದ್ಧ, ನಾಳೆಯೂ ಶಾಲೆ, ಕಾಲೇಜಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರವೂ ಮಳೆಯ ಅಬ್ಬರವಿತ್ತು. ಅಲ್ಲಲ್ಲಿ ಹಾನಿ, ರಸ್ತೆ ಮುಳುಗಡೆ, ಸಮಸ್ಯೆಗಳು ತಲೆದೋರಿದವು. ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಜಿಲ್ಲೆಯಾದ್ಯಂತ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇತ್ತೀಚಿನ (8 ಗಂಟೆಗೆ) ವರದಿಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ, ಸ್ನಾತಕೋತ್ತರ ಪದವಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ನಾಳೆ (ಆಗಸ್ಟ್ 9ರಂದು) ಒಂದು ದಿನದ ರಜೆಯನ್ನು ಮುಂದುವರಿಸಿ ಘೋಷಿಸಲಾಗಿದೆ.

  • ನೇತ್ರಾವತಿ (ಬಂಟ್ವಾಳ) – 8.8 (ಅಪಾಯದ ಮಟ್ಟ 8.5)
  • ನೇತ್ರಾವತಿ (ಉಪ್ಪಿನಂಗಡಿ) 30 (ಅಪಾಯದ ಮಟ್ಟ 31.5)
  • ಕುಮಾರಧಾರಾ (ಉಪ್ಪಿನಂಗಡಿ) 25.6 (ಅಪಾಯದ ಮಟ್ಟ 26.5)

ಬಂಟ್ವಾಳದಲ್ಲಿ ಹೇಗಿತ್ತು ಗುರುವಾರ?

ಜಾಹೀರಾತು

ಇಡೀ ಬಂಟ್ವಾಳ ತಾಲೂಕಿನಲ್ಲಿ ಗುರುವಾರ ಮಳೆ ಕಡಿಮೆ ಇದ್ದರೂ ಘಟ್ಟ ಪ್ರದೇಶಗಳಲ್ಲಿ ಮಳೆಯಾದ ಕಾರಣ ನೇತ್ರಾವತಿ ಇದೇ ಮೊದಲ ಬಾರಿಗೆ ಅಪಾಯದ ಮಟ್ಟ (8.5 ಮೀಟರ್ ) ಮೀರಿತ್ತು. ರಾತ್ರಿ 7.45ರ ವೇಳೆಗೆ 8.8 ಮೀಟರ್ ಎತ್ತರದಲ್ಲಿ ನದಿ ಹರಿಯುತ್ತಿತ್ತು.

ನದಿ ತೀರ ಪ್ರದೇಶಗಳ ಕೆಲವೆಡೆ ನೀರು ಹರಿದುಬಂದಿದ್ದು, ತಾಲೂಕಿನಾದ್ಯಂತ ಮಳೆಹಾನಿಯ ಒಟ್ಟು 53 ಪ್ರಕರಣಗಳು ವರದಿಯಾದವು. ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಉಪ್ಪಿನಂಗಡಿ ಸಂಪರ್ಕ ಸೇತುವೆ ಮುಳುಗಿದೆ. ಕೈರಂಗಳ ಗ್ರಾಮದಲ್ಲಿ ಕಾಲುದಾರಿ ಕುಸಿದು 14 ಮನೆಗಳಿಗೆ ಹೋಗುವ ದಾರಿ ಸಂಪರ್ಕ ಕಡಿತಗೊಂಡಿದೆ. ಬುಧವಾರ ರಾತ್ರಿಯಿಂದ ಗುರುವಾರದವರೆಗೆ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 53 ಕಡೆ ಹಾನಿಗಳು ಸಂಭವಿಸಿವೆ. ಇವುಗಳಲ್ಲಿ 36 ಮನೆಗಳು, 5 ತೋಟಗಳಿಗೆ ಹಾನಿಯಾಗಿವೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.

 www.bantwalnews.comಸಂಪಾದಕ: ಹರೀಶ ಮಾಂಬಾಡಿ

ಸುದ್ದಿ, ಲೇಖನಗಳಿಗೆ, ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.