ಬಂಟ್ವಾಳ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿ 576 ಅಂಕ ಗಳಿಸಿದ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಶಾಲೆಯ ವಾಕ್ ಮತ್ತು ಶ್ರವಣ ಸಮಸ್ಯೆಯ ವಿದ್ಯಾರ್ಥಿನಿ ಹಾಗೂ ಅಂತಾರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಿದ್ದ ಚೆಸ್ ಪಟು ಯಶಸ್ವಿ ಅವರನ್ನು ಮಾಜಿಶಾಸಕಿ ಶಕುಂತಳಾ ಶೆಟ್ಟಿ ಮತ್ತು ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಅಭಿನಂದಿಸಿದರು.
ಕೆದಿಲದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಮಾಜಿ ಶಾಸಕಿ ಜೊತೆ ವಿಟ್ಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಮಾನಾಥ ವಿಟ್ಲ, ಕೆದಿಲ ವಲಯ ಅಧ್ಯಕ್ಷರಾದ ಸುಲೈಮಾನ್, ಧನಂಜಯ, ವಿದ್ಯಾರ್ಥಿನಿಯ ಹೆತ್ತವರಾದ ತಿಮ್ಮಪ್ಪ ಮೂಲ್ಯ ಮತ್ತು ಯಶೋದ ಮೊದಲಾದವರು ಉಪಸ್ಥಿತರಿದ್ದರು
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…