Categories: ವಿಟ್ಲ

ಹಾರೆ, ಪಿಕ್ಕಾಸು ಹಿಡಿದರು, ಸ್ವತಃ ರಸ್ತೆ ನಿರ್ಮಿಸಿದರು!

ರಸ್ತೆ ಇವತ್ತು ಸರಿಯಾಗುತ್ತದೆ, ನಾಳೆ ಸರಿಯಾಗುತ್ತದೆ ಎಂಬ ರಾಜಕಾರಣಿಗಳ ಮಾತು ನಂಬಿ, ಬೇಸತ್ತ ಜನರು ಸ್ವತಃ ತಾವೇ ‘ರಸ್ತೆಗಿಳಿದು’ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸುವ ಮೂಲಕ ‘ನೋಡಿ, ನಾವೇ ರಸ್ತೆ ಮಾಡಿದ್ದೇವೆ’ ಎಂದು ಹೇಳಲು ಸನ್ನದ್ಧರಾಗಿದ್ದಾರೆ.

ಜಾಹೀರಾತು

ಬಂಟ್ವಾಳ ತಾಲೂಕಿನ ಅಳಿಕೆ, ಗಂಗೆಮೂಲೆ, ಮೆಣಸಿನಗಂಡಿ, ಮೂಜಮೂಲೆ, ಮುಳಿಯ ನೆಕ್ಕರೆ, ಕೆಳಗಿನ ಮುಳಿಯವಾಗಿ ನೆಕ್ಕಿತ್ತಪುಣಿ ಸೇರುವ ಈ ರಸ್ತೆಯಲ್ಲಿ 100ಕ್ಕೂ ಅಧಿಕ ಮನೆಗಳಿವೆ. ಇದು ಈ ಊರಿನ ಪ್ರಮುಖ ಸಂಪರ್ಕ ರಸ್ತೆ. ಮಳೆಗಾಲದಲ್ಲಿ ವಾಹನ ಸಂಚಾರಕ್ಕೂ ಕಷ್ಟಕರವಾಗುವಂಥ ಪರಿಸ್ಥಿತಿ. ಓಟಿನ ಬೇಟೆಗೆ ಬರುವ ಸಂದರ್ಭ ನಾನು ಮಾಡಿಸುತ್ತೇನೆ, ಎಂದು ಹೇಳಿದವರು ಮರೆತುಬಿಡುವ ಸನ್ನಿವೇಶಗಳು ಇಲ್ಲೂ ಮರುಕಳಿಸಿವೆ. ಹೀಗಾಗಿ ಇನ್ನು ಮತ್ತೆ  ಬಂದು ಭರವಸೆ ನೀಡುವುದು ಬೇಡ, ನಾವೇ ಅಭಿವೃದ್ಧಿಪಡುಸುತ್ತೇವೆ ಎಂದು ಫಲಾನುಭವಿಗಳು ನಿರ್ಧರಿಸಿ ರಿಪೇರಿ ಮಾಡಿಯೇ ಬಿಟ್ಟರು.

ಉದ್ಯೋಗ ಖಾತ್ರಿ ಯೋಜನೆ ಮೂಲಕ 20ಕ್ಕೂ ಅಧಿಕ ಸ್ಥಳೀಯರು ಜತೆಯಾದರು. ಸುಮಾರು 6 ಲಕ್ಷ ರೂ ವೆಚ್ಚದಲ್ಲಿ 128 ಮೀಟರ್ ಉದಕ್ಕೆ ಕಾಂಕ್ರೀಟ್ ಕಾರ್ಯ ಮಾಡಿ ಸೈ ಎನಿಸಿಕೊಂಡದ್ದು ಈಗ ಫಲ ನೀಡಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ