ಬಂಟ್ವಾಳ

ಈ ಸೊಳ್ಳೆ ಮನುಷ್ಯರಿಗೆ ಕಚ್ಚೋದಿಲ್ವಂತೆ!

ಬಲು ಅಪರೂಪದ ದೊಡ್ಡಗಾತ್ರದ ಸೊಳ್ಳೆಯೊಂದು ತಾಲೂಕಿನ ತಲಪಾಡಿಯಲ್ಲಿ ಗುರುವಾರ ಕಂಡುಬಂದು ಅಚ್ಚರಿಗೆ ಕಾರಣವಾಯಿತು.
ಇಲ್ಲಿನ ನಿವಾಸಿ, ಛಾಯಾಗ್ರಾಹಕ ಮಹೇಶ್ ಶೆಟ್ಟಿ ಅವರ ಮನೆಯಲ್ಲಿ ಈ ಬೃಹತ್ ಗಾತ್ರದ ಸೊಳ್ಳೆ ಕಂಡು ಬಂದಿದ್ದು ಮನೆಮಂದಿಗೆ ಅಚ್ಚರಿ ಮೂಡಿಸಿದೆ. ಸಾಮಾನ್ಯ ಸೊಳ್ಳಗಿಂತ ನಾಲ್ಕುಪಟ್ಟು ದೊಡ್ಡದಿರುವ ಈ ಸೊಳ್ಳೆಯನ್ನು ಗಾಜಿನ ಶೀಸೆಯಲ್ಲಿ ಹಿಡಿದು ತಾಲೂಕು ಆರೋಗ್ಯ ಇಲಾಖೆಯ ಮೂಲಕ ಮಣಿಪಾಲದ ಸಂಶೋಧನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.

ಜಾಹೀರಾತು

ಟೋಕ್ಸೊರಿನ್‌ಚಿಟಿಸ್ Toxorhynchites ಎಂದು ಕರೆಯಲ್ಪಡುವ ಈ ಸೊಳ್ಳೆ ಮಾನವ ಸ್ನೇಹಿಯಾಗಿದ್ದು ಮನುಷ್ಯರಿಗೆ ಕಚ್ಚುವುದಿಲ್ಲ. ಇದರ ಲಾರ್ವಗಳು ದೊಡ್ಡದಾಗಿದ್ದು ಇದು ಸಾಮಾನ್ಯ ಜಾತಿಯ ಸೊಳ್ಳೆಯ ಲಾರ್ವಗಳನ್ನು ತಿಂದು ಅಥವಾ ಹೂವಿನ ಮಕರಂದವನ್ನು ಹೀರಿ ಬದುಕುತ್ತವೆ ಎಂದು ಮಣಿಪಾಲದ ಕೀಟತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ