ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಪುರಂದರ ಹೆಗ್ಡೆ ಮತ್ತೊಮ್ಮೆ ಬಂಟ್ವಾಳಕ್ಕೆ ನಿಯುಕ್ತಿಗೊಂಡಿದ್ದು, ಸೋಮವಾರ, ಪ್ರಭಾರ ತಹಶೀಲ್ದಾರ್ ಜಿ.ಸಂತೋಷ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮತ್ತೊಮ್ಮೆ ಬಂಟ್ವಾಳ ತಾಲೂಕಿನಲ್ಲಿ ಜನರ ಸೇವೆ ಸಲ್ಲಿಸಲು ದೇವರು ಅವಕಾಶ ಕಲ್ಪಿಸಿದ್ದು ಸಂತಸ ತಂದಿದೆ ಎಂದು ನುಡಿದರು.
ಮೇಲಧಿಕಾರಿಗಳು ತಮ್ಮ ಅಧಿಕಾರವನ್ನು ಕಾನೂನಿನ ಚೌಕಟ್ಟಿನಲ್ಲಿ ಸ್ವಚ್ಛ ಆಡಳಿತ ನಡೆಸಬೇಕು ಜನಸ್ನೇಹಿಯಾದ ಸೇವಾ ವೈಖರಿ ಸಿಬ್ಬಂದಿ ವರ್ಗಕ್ಕೆ ಅನುಕರಣೀಯ ಎಂದು ಐಎಎಸ್ ಅಧಿಕಾರಿ ಸಂತೋಷ್ ಅಭಿನಂದಿಸಿದರು.
ಉಪತಹಶೀಲ್ದಾರ್ ಗಳಾದ ವಾಸು ಶೆಟ್ಟಿ, ರಾಜೇಶ್ ನಾಯಕ್, ಗ್ರೆಟ್ಟಾ ಮಸ್ಕರೇನಸ್, ಸೀತಾರಾಮ, ಗ್ರಾಮಕರಣಿಕರು, , ತಾಲೂಕು ಕಚೇರಿ ಸಿಬ್ಬಂದಿ ವರ್ಗ, ಭೂಮಾಪನಾ ಅಧಿಕಾರಿಗಳು, ಸಿಬ್ಬಂದಿ ವರ್ಗ, ಗ್ರಾಮ ಸಹಾಯಕರು ತಹಶೀಲ್ದಾರ್ ಅವರಿಗೆ ಶುಭ ಹಾರೈಸಿದರು. ನವೀನ್ ಬೆಂಜನಪದವು ಸ್ವಾಗತಿಸಿದರು. ರಾಮ ಕಾಟಿಪಳ್ಳ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…