ಬಂಟ್ವಾಳ

ಜೇಸಿಯಿಂದ ಒಂದು ಘಟಕ, ಒಂದು ಶಾಲೆ

ಮಾನವ ಸೇರಿದಂತೆ ಸಕಲ ಜೀವರಾಶಿಗಳಿಗೆ ಆಧಾರವಾಗಿರುವ  ಈ ಭೂಮಿಯನ್ನು ಮಾಲಿನ್ಯಗಳಿಂದ ರಕ್ಷಿಸಬೇಕಾದದು ನಮ್ಮ ಕರ್ತವ್ಯ . ಭಾರತೀಯ ಜೇಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನ ತರಬೇತಿಯೊಂದಿಗೆ ವಿವಿಧ ಸಮಾಜೋಪಯೊಗಿ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಸಿಕೊಂಡಿದೆ, ಈ ನಿಟ್ಟಿನಲ್ಲಿ ಜೋಡುಮಾರ್ಗ ನೇತ್ರಾವತಿ ಜೂನಿಯರ್ ಛೇಂಬರ್ ತರಬೇತಿ ಕಾರ್ಯಕ್ರಮಗಳಿಗೆ ಪ್ರಸ್ತುತ ವರ್ಷ ಶಂಭೂರು ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ ಎಂದು ಎಂದು ಜೇಸಿ ವಲಯ ಉಪಾಧ್ಯಕ್ಷರಾದ ಪಶುಪತಿ ಶರ್ಮ ಹೇಳಿದರು.

ಜಾಹೀರಾತು

ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಜೋಡುಮಾರ್ಗ ನೇತ್ರಾವತಿ ಜೂನಿಯರ್ ಛೇಂಬರ್  ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಮತ್ತು ‘ಒಂದು ಘಟಕ ಒಂದು ಶಾಲೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು.

ಜೇಸಿ ಅಧ್ಯಕ್ಷೆ ಸವಿತಾ ನಿರ್ಮಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ, ದ.ಕ ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ ರಾದ ಉಮೇಶ್ ನಿರ್ಮಲ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ನಿಯೋಜಿತ ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ, ಜೇಸೀ ಉಪಾಧ್ಯಕ್ಷರಾದ ರವೀಂದ್ರ ಕುಕ್ಕಾಜೆ ಜೇಸಿ ಉಪಾಧ್ಯಕ್ಷರಾದ ರವೀಂದ್ರ ಕುಕ್ಕಾಜೆ, ಜೇಸಿರೆಟ್ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಶಾಲಾ ಇಕೋ ಕ್ಲಬ್ ನೋಡಲ್ ಶಿಕ್ಷಕಿ ಭಾರತಿಹರೀಶ್, ಜೇಜೆಸಿ ಅಧ್ಯಕ್ಷೆ ದಿವ್ಯಾ, ಇಂಟರಾಕ್ಟ ಕ್ಲಬ್ ಅಧ್ಯಕ್ಷ ದರ್ಶಿತ್, ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ವಿವಿಧ ಔಷಧಿಯ ಗಿಡಗಳನ್ನು ನೆಟ್ಟರು. ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ ವಿಷಯದಲ್ಲಿ ನಡೆದ ಭಾಷಣ ಸ್ಫರ್ಧೆಯಲ್ಲಿ ದರ್ಶಿತ್ ಪ್ರಥಮ ಸ್ಥಾನ, ನೇಹಾ ದ್ವಿತೀಯ, ಪಾವನಾ ತೃತೀಯ ಹಾಗೂ ಪವನ್ ರಾಜ್ ,ವಿಶ್ಮಿತಾ, ಹರ್ಷಿತಾ ಪ್ರೋತ್ಸಾಹಕರ ಬಹುಮಾನ ಪಡೆದರು.

ಶಿಕ್ಷಕ ಹರಿಪ್ರಸಾದ್ ಕುಲಾಲ್ ಪ್ರಸ್ತಾವಿಸಿ, ಸ್ವಾಗತಿಸಿದರು, ಶಾಲಾ ನಾಯಕ ಪವನ್ ರಾಜ್ ವಂದಿಸಿದರು, ವಿದ್ಯಾರ್ಥಿ ಪಾವನಾ ನಿರುಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.