ಬಂಟ್ವಾಳ

ಬಡ ಕುಟುಂಬಕ್ಕೆ ನೆರವಾದ ಶ್ರೀರಾಮ್ ಫ್ರೆಂಡ್ಸ್ ಸಾಲೆತ್ತೂರು

ತಾಲೂಕಿನ ಕೊಳ್ನಾಡು ಗ್ರಾಮದ ಶಾರದಾ ಅವರ ಬಡ ಕುಟುಂಬಕ್ಕೆ ಸಾಲೆತ್ತೂರು – ಕೊಳ್ನಾಡಿನ ಶ್ರೀರಾಮ್ ಫ್ರೆಂಡ್ಸ್ ವತಿಯಿಂದ ಶೌಚಾಲಯ, ಸ್ನಾನಗೃಹ ಕಟ್ಟಿಸುವ ಕೆಲಸಕ್ಕೆ ಚಾಲನೆ ನೀಡಲಾಯಿತು.

ಜಾಹೀರಾತು

ಶಾರದಾ ಅವರು ಸಂಘಕ್ಕೆಶೌಚಾಲಯ ಮತ್ತು ಸ್ನಾನಗೃಹ ಕಟ್ಟಿಸಿಕೊಡುವಂತೆ ನೀಡಿದ ಮನವಿಗೆ ಸ್ಪಂದಿಸಿದ ಸಂಘ, ಸುಮಾರು 29 ಸಾವಿರ ರೂ. ಖರ್ಚು ಮಾಡಿ ಈ ನೆರವಿಗೆ ಮುಂದಾಗಿದೆ. ಶಾರದರವರ ಮನೆಗೆ ಮಾರ್ಗವಿಲ್ಲದ ಕಾರಣ ಕೆಂಪುಕಲ್ಲು, ಸಿಮೆಂಟ್,  ಇಟ್ಟಿಗೆ, ಮರಳು ಇನ್ನಿತರ ಸಾಮಾಗ್ರಿಗಳನ್ನು ಸಾಗಿಸುವ ಸವಾಲನ್ನು ಹೊತ್ತ ಸಂಘ, ಸುಮಾರು 20 ಮಂದಿಯನ್ನು ಒಟ್ಟುಗೂಡಿಸಿ, ನೆರವಾಗಿದೆ.

ಈ ಬಡ ಕುಟುಂಬದಲ್ಲಿ ಶಾರದ ಮತ್ತು ತಾಯಿ ದಾರಮ್ಮರವರು ಇಬ್ಬರೇ ಇದ್ದಾರೆ. ಶಾರದ ಅವರ ತಂದೆ 8ವರ್ಷಗಳ ಹಿಂದೆ ನಿಧನ ಹೊಂದಿದ್ದರು. ದಾರಮ್ಮರವರು ಆನಾರೋಗ್ಯದಿಂದ ಬಳಲುತ್ತಿದ್ದರೆ, ಶಾರದ ಬೀಡಿಕಟ್ಟಿ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಶ್ರೀರಾಮ ಫ್ರೆಂಡ್ಸ್ ಕೊಳ್ನಾಡು ಸಾಲೆತ್ತೂರು ಅಧ್ಯಕ್ಷ ವಿಶ್ವನಾಥ ಗೌಡ ಕೆದುಮೂಲೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ