ಕಲ್ಲಡ್ಕ

ಸರಕಾರದ ಅನುದಾನವಿಲ್ಲದೆ ನಿರ್ಮಾಣಗೊಂಡ ಸಂಪರ್ಕ ರಸ್ತೆ ಉದ್ಘಾಟನೆ


ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿಯಿಂದ ಮಂಜನಗುಡ್ಡೆ ಶ್ರೀ ಅಣ್ಣಪ್ಪ ಪಂಜುರ್ಲಿ ಮೂಲಸ್ಥಾನಕ್ಕೆ ಹೋಗುವ ಸಂಪರ್ಕ ರಸ್ತೆ ಮತ್ತು ಪೂರ್ಲಿಪ್ಪಾಡಿಯಿಂದ ಶಿವಾಜಿನಗರಕ್ಕೆ ಹೋಗುವ ಸಂಪರ್ಕ ರಸ್ತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಭಾನುವಾರ ಉದ್ಘಾಟಿಸಿದರು.

ಸರಕಾರದ ಅನುದಾನವಿಲ್ಲದೆ ಸ್ಥಳೀಯರ ಸ್ವಂತ ಖರ್ಚಿನಲ್ಲಿ ಬಾಳ್ತಿಲ ಮಾಜಿ ಗ್ರಾ.ಪಂ.ಸದಸ್ಯ ಬಿ.ಕೆ. ಅಣ್ಣು ಪೂಜಾರಿ ಮತ್ತಿತರ ದಾನಿಗಳು ಉಚಿತವಾಗಿ ನೀಡಿದ ಜಾಗದಲ್ಲಿ ಇದು ನಿರ್ಮಾಣಗೊಂಡಿದೆ.

ಬಾಳ್ತಿಲ ಗ್ರಾಮಸ್ಥರ ಬಹುಸಮಯಯ ಬೇಡಿಕೆಯಾದ ಈ ರಸ್ತೆ ಕಳೆದ ಹಲವು ಸಮಯಗಳಿಂದ ಕೆಲವೊಂದು ಅಡೆತಡೆಗಳಿಂದಾಗಿ ಅಭಿವೃದ್ದಿ ಕಂಡಿರಲಿಲ್ಲ. ಇದರಿಂದಾಗಿ ಈ ಭಾಗದ ಜನರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದರು. ಮಳೆಗಾಲದಲ್ಲಂತೂ ಸರಿಯಾಧ ಸಂಪರ್ಕ ರಸ್ತೆಯಿಲ್ಲದೆ ನಡೆದಾಡಲು ತೊಂದರೆ ಪಡಬೇಕಾಗಿತ್ತು. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕವೇ ಈ ಪ್ರದೇಶವಿದ್ದರೂ ಯವುದೋ ಕುಗ್ರಾಮದಲ್ಲಿದ್ದ ಅನುಭವವನ್ನು ನೀಡುತ್ತಿತ್ತು.
ಇದನ್ನು ಮನಗಂಡ ಬಾಳ್ತಿಲ ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಕೆ. ಅಣ್ಣುಯವರು ತಾನು ಸ್ಥಳದಾನ ನೀಡಿ, ಇತರ ಸ್ಥಳೀಯ ದಾನಿಗಳ ನೆರವನ್ನು ಪಡದು ರಸ್ತೆಗೆ ಬೇಕಾದಷ್ಟು ಜಮೀನು ಹೊಂದಿಸಿ ರಸ್ತೆ ನಿರ್ಮಿಸಿ ಕೊಟ್ಟಿದ್ದಾರೆ.

ಜಾಹೀರಾತು

ಈ ಸಂದರ್ಭ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಜಿ.ಪಂ.ಸದಸ್ಯೆ ಕಮಲಾಕ್ಷೀ ಕೆ ಪೂಜಾರಿ, ತಾ.ಪಂ.ಸದಸ್ಯೆ ಲಕ್ಮೀ ಗೋಪಾಲಾಚಾರ್ಯ, ಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ ನೆಲ್ಲಿ, ಕಾಂಪ್ರಬೈಲು ಉಳ್ಳಾಲ್ತಿ ಮತ್ತು ಅಜ್ಜರ ದೈವಸ್ಥಾನದ ಅಧ್ಯಕ್ಷ ಬ್ರಿಜೇಶ್ ಬಾಳ್ತಿಲ ಬೀಡು, ಬಾಲ್ತಿಲ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಕೆ ಅಣ್ಣು ಪೂಜಾರಿ ಪ್ರಮುಖರಾದ ನವೀನ್ ಕುರ್ಮಾನ್, ಮೋಹನ್ ನಾಯಕ್ ಮತ್ತು ಕ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts