ತುಳುಕೂಟ ಬಂಟ್ವಾಳ ಮತ್ತು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ.ರೋಡು ಆಡಳಿತ ಮಂಡಳಿ ಆಶ್ರಯದಲ್ಲಿ ಆಟಿ ಅಮವಾಸ್ಯೆಯ ಸಾರ್ವಜನಿಕ ಪಾಲೆದ ಕೆತ್ತೆ ಕಷಾಯ ವಿತರಣೆ ಬಿ.ಸಿ.ರೋಡು ರಕ್ತೇಶ್ವರಿ ಸನ್ನಿದಿಯಲ್ಲಿ ನಡೆಯಿತು.
ಈ ಸಂಧರ್ಭ ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಸುದರ್ಶನ್ ಜೈನ್, ರಕ್ತೇಶ್ವರಿ ದೇವಿ ಸನ್ನಿಧಿ ಆಡಳಿತ ಮಂಡಳಿ ಅಧ್ಯಕ್ಷ ಬಿ.ಮೋಹನ್, ಹಿರಿಯರಾದ ಶಿವಶಂಕರ್ .ಎನ್. ಕೆ. ಸೀತಾರಾಮ್ ಶೆಟ್ಟಿ, ಸುಭಾಶ್ಚಂದ್ರ ಜೈನ್, ಶೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ್ ಸಿ. ಪೆರ್ನೆ, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ವಿಶ್ವನಾಥ್ ಬಿ. ಪರಮೇಶ್ವರ ಮೂಲ್ಯ, ದೇವಪ್ಪ ಕುಲಾಲ್ ಪಂಜಿಕಲ್ಲು, ಮಧುಸೂದನ್ ಶೆಣೈ, ಸತೀಶ್ ಕುಮಾರ್, ದಾಮೋದರ್ ಮಾಸ್ಟರ್ ಏರ್ಯ, ದೇಗುಲದ ಮೆನೇಜರ್ ಸುಧಾಕರ್ ಉಪಸ್ಥಿತರಿದ್ದರು.
ಈ ವರ್ಷ ಪ್ರಥಮ ಬಾರಿಗೆ ಮೆಂತೆ ಗಂಜಿಯನ್ನು ಮಮತೇಶ್ ಕುಲಾಲ್ ವ್ಯವಸ್ಥೆ ಮಾಡಿದ್ದರು. ಆಗಮಿಸಿದ ಭಕ್ತರು ಕಷಾಯ ಸ್ವೀಕರಿಸಿದರು. ಇದೇ ಸಂಧರ್ಭ ಪ್ರತೀ ವರ್ಷ ಕಷಾಯ ತಯಾರಿಸುವ ಉದಯ ಕುಮಾರ್ ಭಟ್ ಕಂದೂರು ಮತ್ತು ಪಾಲೆದ ಕೆತ್ತೆ ಸಂಗ್ರಹಿಸಿ ತಂದು ಸಹಕರಿಸುವ ಆನಂದ ಪೂಜಾರಿ ಪಂಜಿಕಲ್ಲು ಮತ್ತು ಲೋಕೇಶ್ ಪೂಜಾರಿ ಪಂಜಿಕಲ್ಲು ಅವರನ್ನು ಗಣ್ಯರ ಸಮ್ಮುಖ ಗೌರವಿಸಲಾಯಿತು. ತುಳುಕೂಟ ಬಂಟ್ವಾಳದ ಕಾರ್ಯದರ್ಶಿ ಎಚ್ಕೆ ನಯನಾಡು ಸ್ವಾಗತಿಸಿ ವಂದಿಸಿದರು.