ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಕೊಲೆ ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ಕನ್ಯಾನ ಗ್ರಾಮದ ಕಾಂಚಾರು ನಿವಾಸಿ ದೇವಿಕುಮಾರ್ (43) ಎಂಬಾತನಿಗೆ ಮಂಗಳೂರು ಆರನೇ ಹೆಚ್ಚುವರಿ ನ್ಯಾಯಾಲಯ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಆರೋಪಿಗೆ ಏಳು ವರ್ಷ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.
2014ರಲ್ಲಿ ಘಟನೆ ನಡೆದಿತ್ತು. 2013ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ಸವಿತಾಳನ್ನು ವಿವಾಹವಾಗಿ ಬಳಿಕ ವರದಕ್ಷಿಣೆಗಾಗಿ ಪೀಡಿಸಿ, ಹಲ್ಲೆ ನಡೆಸಿದ್ದು, 2014ರಲ್ಲಿ ನೇಣು ಹಾಕಿ ಕೊಲೆ ಮಾಡಿದ್ದ ಎಂದು ಅಂದಿನ ಡಿವೈಎಸ್ಪಿ ರಶ್ಮಿ ಪರಡ್ಡಿ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ಇದರ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಸರ್ಕಾರದ ಪರವಾಗಿ ನ್ಯಾಯವಾದಿ ಜುಡಿತಾ ಹೊಲ್ಗಾ ಅವರು ವಾದಿಸಿದ್ದರು.
,,,,,,,,,,,,,,
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)