ಪಾಕಶಾಲೆಯೇ ವೈದ್ಯಶಾಲೆ

ಕೀಟ ಕಡಿತದ ಗಾಯವೇ? ಕಟ್ಟಿಗೆ ಮಸಿ ಜೇನುತುಪ್ಪದಲ್ಲಿ ಕಲಸಿ ಹಚ್ಚಿ..

  • ಡಾ.ಎ.ಜಿ.ರವಿಶಂಕರ್

www.bantwalnews.com

ಜಾಹೀರಾತು

ಈಗಿನ ಕಾಲದಲ್ಲಿ ಕಟ್ಟಿಗೆ ಒಲೆಯ ಬಳಕೆಯೇ ವಿರಳವಾಗತೊಡಗಿದೆ. ಆದರೆ ಕಟ್ಟಿಗೆ ಉರಿದು ದೊರಕುವ ಮಸಿಯು ಹಲವಾರು ಸಂದರ್ಭಗಳಲ್ಲಿ ರಾಮ ಬಾಣವಾಗಿದೆ.

  1. ಸೊಳ್ಳೆ, ಜೆನುನೋಣ ,ಕೀಟಗಳು ಕಡಿದಾಗ ಮಸಿಯನ್ನು ಪುಡಿಮಾಡಿ ಸ್ವಲ್ಪ ಜೇನುತುಪ್ಪದಲ್ಲಿ ಕಲಸಿ ಹಚ್ಚಿದರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ ಮತ್ತು ನಂಜು ಕರಗಿ ಹೋಗುತ್ತದೆ.
  2. ಕಾಫಿ ,ಚಹಾ ಇತ್ಯಾದಿಗಳಿಂದ ಹಲ್ಲುಗಳಲ್ಲಿ ಕಲೆ ಆಗಿದ್ದರೆ ಮಸಿಯನ್ನು ಹಾಕಿ ಉಜ್ಜಬೇಕು. ಇದರಿಂದ ಹಲ್ಲು ಶುಭ್ರವಾಗುತ್ತದೆ.
  3. ಹಾವು ಕಡಿದ ಜಾಗಕ್ಕೆ ಮಸಿಯನ್ನು ಹಚ್ಚಿದರೆ ಅದು ವಿಷವನ್ನು ಹೀರುತ್ತದೆ. ಇದನ್ನು ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು.
  4. ಮುಖದ ಮೊಡವೆಗಳ ಮೇಲೆ ಮಸಿಯನ್ನು ಜೇನುತುಪ್ಪದಲ್ಲಿ ಕಲಸಿ ಹಚ್ಚುವುದರಿಂದ ಮೊಡವೆಗಳು ವಾಸಿಯಾಗುತ್ತವೆ.
  5. ದೇಹದಲ್ಲಿ ಕುರ ಮೂಡಿದಾಗ ಮಸಿಯನ್ನು ಪುಡಿಮಾಡಿ ಬೆಣ್ಣೆಯಲ್ಲಿ ಕಲಸಿ ಕುರದ ಮೇಲೆ ಹಚ್ಚಿದರೆ ನೋವು ಹಾಗು ಬಾವು ಕಡಿಮೆಯಾಗುತ್ತದೆ ಅಥವಾ ಬೇಗನೆ ಹಣ್ಣಾಗಿ ಕೀವು ಹೊರಗೆ ಬರುತ್ತದೆ.
  6. ಹೊಟ್ಟೆ ಉಬ್ಬರಿಸುವಿಕೆ ಇದ್ದಾಗ ಸಾಧಾರಣ 500 ಮಿ.ಗ್ರಾಂ ನಷ್ಟು ಮಸಿಯನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
  7. ಮಸಿಯ ಸೇವನೆಯಿಂದ ಮಧ್ಯದ ಅಮಲು ಕಡಿಮೆಯಾಗುತ್ತದೆ.
  8. ವಿಷ ಅಥವಾ ನಂಜು ಶರೀರವನ್ನು ಸೇರಿದಾಗ ಸಣ್ಣ ತುಂಡು ಮಸಿಯನ್ನು ತಿನ್ನಿಸಬೇಕು.ಇದು ವಿಷ ನಿವಾರಣೆಗೆ ಪ್ರಥಮ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ.
  9. ಸರಿಯಾದ ಪ್ರಮಾಣದಲ್ಲಿ ವಯೋ ಅನುಸಾರ ನಿಯಮಿತವಾಗಿ ಮಸಿಯನ್ನು ಸೇವಿಸುವುದರಿಂದ ಸಂಧುಗಳು ದ್ರುಢವಾಗುತ್ತವೆ ಮತ್ತು ನೋವು ಕಡಿಮೆಯಾಗುತ್ತದೆ.
  10. ನಿಯಮಿತವಾದ ಮಸಿಯ ಸೇವನೆಯು ಶರೀರದ ಕೆಟ್ಟ ಕೊಬ್ಬಿನ ಅಂಶವನ್ನು ಕರಗಿಸುತ್ತದೆ.
  11. ಮಸಿಯು ಹೃದಯ,ಮಾಂಸ,ನರ ಇತ್ಯಾದಿಗಳಿಗೆ ಬಲದಾಯಕವಾಗಿದ್ದು ವಯೋಸಹಜವಾದ ಕ್ಷೀಣತೆಯನ್ನು ತಡೆಗಟ್ಟಲು ಸಹಕರಿಸುತ್ತದೆ

ಜಾಗ್ರತೆ:

  • ಮಸಿ ಸೇವಿಸುವ ಮೊದಲು ವಿಷ ರಹಿತವಾದ ಮರದ್ದು ಎಂದು ದೃಢ ಪಡಿಸಿಕೊಳ್ಳುವುದು ಉತ್ತಮ.
  • ಪ್ರಮಾಣಕ್ಕಿಂತ ಅಧಿಕವಾದ ಮಸಿ ಸೇವನೆಯಿಂದ ಅತಿಯಾದ ಬಾಯಾರಿಕೆಯಾಗುತ್ತದೆ ಮತ್ತು ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.