ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ವಲಯದ ವತಿಯಿಂದ ವಲಯದ ಸದಸ್ಯರಿಗೆ ಒಂದು ದಿನದ ವೀಡೀಯೊ ಕಾರ್ಯಗಾರವು ಬಿ.ಸಿ.ರೋಡಿನ ಹೋಟೆಲ್ ಕೃಷ್ಣಿಮಾದಲ್ಲಿ ಜರಗಿತು.
ಕಾರ್ಯಗಾರದ ಉದ್ಘಾಟನೆಯನ್ನು ವಲಯದ ಗೌರವಾಧ್ಯಕ್ಷರಾದ ಸುಕುಮಾರ್ ಬಂಟ್ಟಾಳ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷರಾದ ಹರೀಶ್ ಮಾಣಿ ವಹಿಸಿದ್ದರು. ಕಾರ್ಯಗಾರಾದ ಸಂಪನ್ಮೂಲ ವ್ಯಕ್ತಿಗಳಾಗಿ ನವೀನ್ ಬೇಕಲ್ (ಹೈ-ವೀಶನ್ ಮಂಗಳೂರು) ವಹಿಸಿದ್ದರು. ವಲಯದ ಗೌರವ ಸಲಹೆಗಾರರಾದ ದಯಾನಂದ ಬಂಟ್ವಾಳ ಕಾರ್ಯಕ್ರಮವನ್ನು ನಿರೂಪಿಸಿ ಆನಂದ್ ಮುಡಿಪು ಸ್ವಾಗತಿಸಿ, ಕಾರ್ಯದರ್ಶಿ ರೋಶನ್ ಕಲ್ಲಡ್ಕ ವಂದಿಸಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…