ಬಂಟ್ವಾಳ

ನಿವೃತ್ತಿ ಪಿಂಚಣಿಗೆ ಬೀಡಿ ಕಾರ್ಮಿಕರ ಕ್ಯೂ

ಬಂಟ್ವಾಳ: ಬೀಡಿ ಕಾರ್ಮಿಕರ ನಿವೃತ್ತಿ ಪಿಂಚಣಿಗಾಗಿ ಕೂಪನ್ ಪಡೆಯಲು ಫಲಾನುಭವಿಗಳನ್ನು ಮುಂಜಾನೆಯೇ ಕಚೇರಿಗೆ ಆಹ್ವಾನಿಸಿದ ಹಿನ್ನಲೆಯಲ್ಲಿ ನೂಕು ನುಗ್ಗಲು ಉಂಟಾಗಿ ಅನೇಕ ಮಂದಿ ಮಹಿಳೆಯರು ಹಾಗೂ ವೃದ್ದರು ತೊಂದರೆ ಅನುಭವಿಸಿದ ಘಟನೆ ಬಿ.ಸಿ.ರೋಡಿನ ಅಂಚೆ ಕಚೇರಿ ಬಳಿ ಇರುವ ಪಾಣೆಮಂಗಳೂರು ಬೀಡಿ ಮತ್ತು ಜನರಲ್ ವರ್ಕರ್‍ಸ್  ಯೂನಿಯನ್‌ನ ಕಚೇರಿ ಮುಂದೆ ನಡೆಯಿತು.

ಕೂಪನ್ ಪಡೆಯಲು ಬೆಳಿಗ್ಗೆ 7 ಗಂಟೆಯ ವೇಳೆಗೆ ಫಲಾನುಭವಿ ಕಾರ್ಮಿಕರು ಕಚೇರಿಗೆ ಆಗಮಿಸಿದ್ದರೂ ಕೂಡ ಅವ್ಯಸ್ಥೆಯಿಂದಾಗಿ ಮಧ್ಯಾಹ್ನ 12 ಗಂಟೆಯಾದರೂ ಕಚೇರಿ ಒಳಪ್ರವೇಶಿಸಲಾಗದೆ ಬಿಸಿಲಿನಲ್ಲಿ ನಿಂತು ಪರಿತಪಿಸಬೇಕಾಯಿತು. ಕೆಲ ವೃದ್ದ ಮಹಿಳೆಯರಂತೂ ತೀವ್ರ ಸುಸ್ತಾಗಿ ಮುಂಭಾಗದ ಅಂಚೆ ಕಚೇಯ ಜಗಲಿಯನ್ನು ಆಶ್ರಯಿಸಿದರೆ ಮತ್ತೆ ಕೆಲವರು ಈ ಅವ್ಯವಸ್ಥೆಯ ವಿರುದ್ದ ಹಿಡಿ ಶಾಪ ಹಾಕುವ ದೃಶ್ಯ ಕಂಡು ಬಂತು. ಎಲ್ಲಾ ಫಲಾನುಭವಿಗಳನ್ನು ಒಂದೇ ದಿನ ಕಚೇರಿಗೆ ಆಹ್ವಾನಿಸಿದ ಹಿನ್ನಲೆಯಲ್ಲಿ ಈ ರೀತಿ ನೂಕು ನುಗ್ಗಲು ನಿರ್ಮಾಣವಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ