ಪ್ರಮುಖ ಸುದ್ದಿಗಳು

ಎಸ್ ಐ ಆರ್ ರದ್ದಾಗಲೇಬೇಕು: ಎಐಟಿಯುಸಿ ಪ್ರತಿನಿಧಿ ಸಮಾವೇಶದಲ್ಲಿ ಆಗ್ರಹ

ಎಸ್ ಐ ಆರ್ ರದ್ದುಪಡಿಸಲು ಕ್ರಮಕೈಗೊಳ್ಳುವಮತೆ ಬಿಸಿರೋಡು ಸಿಪಿಐ ಸಭಾಭವನದಲ್ಲಿ ನಡೆದ ಎಐಟಿಯುಸಿ ೧೭ ನೇ ದ.ಕ ಮತ್ತು ಉಡುಪಿ ಜಿಲ್ಲಾ ಸಮ್ಮೇಳನದ ಪ್ರತಿನಿಧಿ ಸಮಾವೇಶದಲ್ಲಿ ನಿರ್ಣಯಿಸಲಾಗಿದೆ..

ಪ್ರತಿನಿಧಿ ಸಮಾವೇಶವನ್ನು ಎಐಟಿಯುಸಿ ಜಿಲ್ಲಾ ಕೋಶಾಧಿಕಾರಿ ಎ..ಪ್ರಭಾಕರ್ ರಾವ್ ಉದ್ಘಾಟಿಸಿ ಕಾರ್ಮಿಕ ವರ್ಗದ ಐತಿಹಾಸಿಕ ಹಕ್ಕುಗಳನ್ನು ಉಳಿಸಿಕೊಳ್ಳಲು ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗವೇಕಿದೆ ಎಂದು ಕರೆ ನೀಡಿದರು.

ಪ್ರತಿನಿಧಿ ಸಮಾವೇಶದ ಅಧ್ಯಕ್ಷೀಯ ಮಂಡಳಿಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್ ವಿ ರಾವ್, ಜಿಲ್ಲಾ ನಾಯಕರುಗಳಾದ ಕುಸುಮ ವಿಶ್ವನಾಥ್, ಹರ್ಷಿತ್ ಸುವರ್ಣ ಇದ್ದರು.

ಜಾಹೀರಾತು
VNR GOLD

ವೇದಿಕೆಯಲ್ಲಿ ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್‍ಯದರ್ಶಿ ಬಿ.ಶೇಖರ್, ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ವಿ.ಕುಕ್ಯಾನ್ ಇದ್ದರು. ವರದಿ ಮತ್ತು ಲೆಕ್ಕಪತ್ರವನ್ನು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ವಿ.ಎಸ್ ಬೇರಿಂಜ ಮಂಡಿಸಿದರು. ವರದಿ ಮೇಲೆ ಸಂಘಟನಾತ್ಮಕ ಚರ್ಚೆನಡೆದು ಅಮಗೀಕರಿಸಲಾಯಿತು.

ಸಮ್ಮೇಳದಲ್ಲಿ ಮಂಡಿಸಳಾದ ಠರಾವುಗಳನ್ನು ನಿರ್ಣಯ ಸಮಿತಿ ಪರವಾಗಿ ಸಂಚಾಲಕ ಕರುಣಾಕರ ಮಾರಿಪಳ್ಳ ಹಾಗೂ ಶಮಿತ ಸುರೇಶ್ ಮಂಡಿಸಿದರು. ನವೆಂಬರ್ ೨೨ ರಿಮದ ೨೬ ರ ವರೆಗೆ ಬೆಂಗಳೂರಿನಲ್ಲಿ ನಡೆಯುವ ಎಐಟಿಯುಸಿ ೪೩ ನೇ ರಾಷ್ಟ್ರೀಯ ಮಹಾಅಧಿವೇಶನಕ್ಕೆ ಪ್ರತಿನಿಧಿಗಳ ಆಯ್ಕೆ ನಡೆಯಿತು. ನವೆಂಬರ್ ೨೨ ರಂದು ನಡೆಯುವ ಬೃಹತ್ ರ್‍ಯಾಲಿಗೆ ದ.ಕ ಮತ್ತು ಉಡುಪಿ ಜಿಲ್ಲೆಯಿಂದ ಸುಮಾರು ೫೦೦ ಜನ ಭಾಗವಹಿಸಲು ತೀರ್ಮಾನಿಸಲಾಯಿತು. ಮುಂದಿನ ಸಮ್ಮೇಳದ ಅವಧಿಗೆ ಸುಮಾರು ೩೫ ಜನ ಸದಸ್ಯರಿರುವ ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಮಂಡಳಿ ರಚಿಸಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಎಚ್.ವಿ.ರಾವ್, ಉಪಾಧ್ಯಕ್ಷರುಗಳಾಗಿ ಬಿ.ಶೇಖರ್, ಕೃಷ್ಣಪ್ಪ ವಾಮಮಜೂರು, ಭಾರತಿ ಪ್ರಶಾಂತ್, ಒ ಕೃಷ್ಣ, ಶಶಿಕಲಾ ಗಿರೀಶ್ ಪ್ರಧಾನ ಕಾರ್‍ಯದರ್ಶಿಯಾಗಿ ವಿ.ಎಸ್ ಬೇರಿಂಜ, ಕಾರ್‍ಯದರ್ಶೀಗಳಾಗಿ ಸುರೇಶ್ ಕುಮಾರ್ ಬಂಟ್ವಾಳ್, ಕರುಣಾಕರ ಮಾರಿಪಳ್ಳ, ಶಮಿತ, ಹರ್ಷಿತ್ ಸುವರ್ಣ, ಮೀನಾಕ್ಷಿ ಶಾಂತಿಪಳಿಕೆ ಹಾಗೂ ಕೋಶಾಧಿಕಾರಿಯಾಗಿ ಎ.ಪ್ರಭಾಕರ ರಾವ್ ಆಯ್ಕೆಯಾದರು.ಪ್ರಾರಂಭದಲ್ಲಿ ಎಐಟಿಯುಸಿ ಜಿಲ್ಲಾ ಕಾರ್‍ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ನಿರೂಪಿಸಿದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ವಿ.ಎಸ್ ಬೇರಿಂಜ ವಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.